ಪಿಎಸ್ ಐ ನೇಮಕಾತಿ ಅಕ್ರಮ: ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳಲಿವೆ ಎಂದ ನಳಿನ್ ಕುಮಾರ್ ಕಟೀಲ್

Prasthutha|


ಹೊಸಪೇಟೆ: ಪಿಎಸ್ ಐ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಕಾಂಗ್ರೆಸ್ ನ ಒಂದೊಂದೇ ತಲೆಗಳು ಹೊರಬರುತ್ತಿವೆ. ತನಿಖೆ ಪೂರ್ಣಗೊಂಡಾಗ ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳುತ್ತವೆ. ಆದರೆ, ಕಾಂಗ್ರೆಸ್ ನವರು ಶುದ್ಧಹಸ್ತರಂತೆ ಆರೋಪ ಮಾಡುತ್ತಿದ್ದಾರೆ. ಕಲ್ಲು ಎಸೆದು ಓಡುವ ಗುಣ ಕಾಂಗ್ರೆಸ್ಸಿಗರದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

- Advertisement -


ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ ಐ ಅಕ್ರಮದ ಬಗ್ಗೆ ಸಿಐಡಿಯಿಂದ ತನಿಖೆ ನಡೆಯುತ್ತಿದೆ. ಈಗಾಗಲೇ ಅನೇಕರನ್ನು ಬಂಧಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ನವರು ಹೆಚ್ಚಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ನಮ್ಮ ಪಕ್ಷವಾಗಲಿ, ಸರ್ಕಾರವಾಗಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಯಾರು, ಎಷ್ಟೇ ಪ್ರಭಾವಿಶಾಲಿಯಾಗಿದ್ದರೂ ಬಿಡುವುದಿಲ್ಲ ಎಂದು ಹೇಳಿದರು.


ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಸಿಗೆ, ಹಾಸ್ಟೆಲ್ ಸೇರಿದಂತೆ ಹತ್ತಾರು ಹಗರಣಗಳು ನಡೆದಿದ್ದವು. ಯಾವುದರ ಬಗ್ಗೆಯೂ ತನಿಖೆ ನಡೆಸಿರಲಿಲ್ಲ. ಎಲ್ಲ ಮುಚ್ಚಿ ಹಾಕಿದ್ದರು. ನಾವು ಕಾಂಗ್ರೆಸ್ ನಂತೆ ಹಗರಣಗಳನ್ನು ಮುಚ್ಚಿ ಹಾಕುತ್ತಿಲ್ಲ. ತನಿಖೆ ನಡೆಸುತ್ತಿದ್ದೇವೆ. ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮ್ಮವರ ತಲೆಗಳು ಉರುಳುತ್ತವೆ ಎಂಬ ಭಯದಿಂದ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಟೀಲ್ ಆರೋಪಿಸಿದರು.



Join Whatsapp