ನವದೆಹಲಿ | ರಮಝಾನ್ ಬಳಿಕ ಮರ್ಕಝ್ ನಿಝಾಮುದ್ದೀನ್ ತೆರೆಯಲು ಹೈಕೋರ್ಟ್ ಅನುಮತಿ

Prasthutha|

ನವದೆಹಲಿ: ದೆಹಲಿಯ ಮರ್ಕಝ್ ನಿಝಾಮುದ್ದೀನ್ ಎಂಬಲ್ಲಿರುವ ಬಂಗ್ಲಿ ವಾಲಿ ಮಸೀದಿ ರಮಝಾನ್ ತಿಂಗಳ ಬಳಿಕವೂ ತೆರೆಯಲು ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

- Advertisement -

ತನ್ನ ಹಿಂದಿನ ಮಧ್ಯಂತರ ಆದೇಶವನ್ನು ಮುಂದುವರಿಸಿದ್ದು, ಮಸೀದಿ ಅಕ್ಟೋಬರ್ 14 ರವರೆಗೆ ತೆರೆದಿರುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.

2020 ರ ಮಾರ್ಚ್ ಬಳಿಕ ರಮಝಾನ್ ತಿಂಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಮಸೀದಿಗೆ ಸಾರ್ವಜನಿಕ ಪ್ರವೇಶವನ್ನು ಅನುಮತಿಸುವುದು ಇದೇ ಮೊದಲು ಎಂದು ಹೇಳಲಾಗಿದೆ.

- Advertisement -

ಕೋವಿಡ್ 19 ನಿಯಮಗಳ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮರ್ಕಝ್ ನಿಝಾಮುದ್ದೀನ್ ಮಸೀದಿಯನ್ನು ಲಾಕ್ ಮಾಡಲಾಗಿದ್ದು, ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಈ ಮಧ್ಯೆ 2020 ರ ಮಾರ್ಚ್ ನಿಂದ ಹಬ್ಬಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇವಲ ಐದು ಜನರಿಗೆ ಅನುಮತಿ ನೀಡಲಾಗಿತ್ತು. ಕಳೆದ ವರ್ಷ ಶಬ್-ಎ-ಬರಾತ್ ಮತ್ತು ರಮಝಾನ್ ತಿಂಗಳಲ್ಲಿ ಕೇವಲ 50 ಜನರಿಗೆ ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಅನುಮತಿ ನೀಡಲಾಗಿತ್ತು.

ಈ ವರ್ಷದ ಮಾರ್ಚ್ನಲ್ಲಿ ರಮಝಾನ್ ತಿಂಗಳಲ್ಲಿ ಮಸೀದಿಯ ಎಲ್ಲಾ ಐದು ಮಹಡಿಗಳಲ್ಲಿ ಪ್ರಾರ್ಥನೆ ನಡೆಸಲು ಹೈಕೋರ್ಟ್ ಅನುಮತಿ ನೀಡಿತ್ತು.



Join Whatsapp