ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೊಲೆಗೈಯ್ಯಲೂ, ಬಲಿದಾನಕ್ಕೂ ಸಿದ್ಧ; ಸುದರ್ಶನ್ ಟಿವಿಯ ಮಾಲಿಕ ಸುರೇಶ್ ಚವ್ಹಾಂಕೆ ನೇತೃತ್ವದಲ್ಲಿ ಪ್ರತಿಜ್ಞೆ

Prasthutha|

ಗುರುಗಾಂವ್: ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ನಾವು ಕೊಲೆಗೈಯ್ಯಲೂ, ಬಲಿದಾನಕ್ಕೂ ಸಿದ್ಧವಾಗಬೇಕಾಗಿದೆ ಎಂದು ಸುದರ್ಶನ್ ಟಿವಿ ಮಾಲಿಕ ಸುರೇಶ್ ಚವ್ಹಾಂಕೆ ನೇತೃತ್ವದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ದ್ವೇಷ ಭಾಷಣದ ಬಳಿಕ ಹರ್ಯಾಣದ ಅಂಬಾಲಾದಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಸುರೇಶ್ ಚವ್ಹಾಂಕೆ, ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ವೀಡಿಯೋದಲ್ಲಿ, ‘ಭಾರತವನ್ನು ಹಿಂದೂರಾಷ್ಟ್ರವಾಗಿ ಪರಿವರ್ತಿಸಲು ಅಗತ್ಯ ಬಂದರೆ ಪ್ರಾಣತ್ಯಾಗ, ಬಲಿದಾನಕ್ಕೂ ಸಿದ್ಧವಿದ್ದೇವೆ. ಅಗತ್ಯಬಿದ್ದಲ್ಲಿ ಹತ್ಯೆಗೆಯ್ಯಲು ಸಿದ್ಧರಾಗಿದ್ದೇವೆ ಎಂದು ಪ್ರತಿಜ್ಞೆ ಮಾಡುತ್ತಿರುವುದು ವೀಡಿಯೊದಲ್ಲಿದೆ.

- Advertisement -

ಸಂಘಪರಿವಾರದ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.



Join Whatsapp