ಪಿಎಸ್ ಐ ನೇಮಕಾತಿ ಅಕ್ರಮ: ಮೊದಲ Rank ಪಡೆದ ರಚನಾ ವಿರುದ್ಧವೂ ಕೇಸ್ !

Prasthutha|

ಬೆಂಗಳೂರು: ಹೆಣ್ಣು ಮಗು ಎನ್ನುವ ಕಾರಣದಿಂದ ತಂದೆ ಬಿಟ್ಟು ಹೋಗಿದ್ದರಿಂದ ಉಂಟಾದ ಕಡು ಬಡತನದಲ್ಲಿ ಓದಿ ಪಿಎಸ್ ಐ ನೇಮಕಾತಿಯಲ್ಲಿ ಪಾಸ್ ಆಗಿ, ಹುದ್ದೆ ಪಡೆದಿದ್ದೇನೆ ಎಂದು ಪ್ರತಿಭಟನೆಯಲ್ಲಿ ಕರುಣಾಜನಕ ಕತೆ ಹೇಳಿದ್ದ ಮೊದಲ Rank ಬಂದಿದ್ದ ರಚನಾ ಎಂಬವರ ವಿರುದ್ಧವೂ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -


ಕಳೆದ ಏ.30ರಂದು ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಸರ್ಕಾರ ಪಿಎಸ್ ಐ ನೇಮಕಾತಿ ಮರು ಪರೀಕ್ಷೆ ವಿರೋಧಿಸಿ ನಡೆಸಿದ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪ್ರತಿಭಟನೆಯಲ್ಲಿ, ಮಹಿಳಾ ವಿಭಾಗದಲ್ಲಿ ಮೊದಲ Rank ಪಡೆದ ಅಭ್ಯರ್ಥಿ ರಚನಾ ಭಾಗಿಯಾಗಿ ತನ್ನ ಕಡು ಬಡತನದಲ್ಲಿ ಓದಿ ಪರೀಕ್ಷೆ ಪಾಸ್ ಮಾಡಿದ್ದನ್ನು ಹೇಳಿಕೊಂಡಿದ್ದರು.


ನಮ್ಮ ತಂದೆ ಹೆಣ್ಣು ಮಗು ಎನ್ನುವ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಿದ್ದರು. ತಾಯಿ ಸಾಕಿದ್ದು ಕಡು ಬಡತನದಲ್ಲಿ ಓದಿ ಪಿಎಸ್ ಐ ನೇಮಕಾತಿಯಲ್ಲಿ ಪಾಸ್ ಆಗಿ, ಹುದ್ದೆ ಪಡೆದಿದ್ದು ಪರೀಕ್ಷೆ ರದ್ದುಪಡಿಸಿರುವುದರಿಂದ ನಾನು ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದಿದ್ದರು
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ನಾನು ಭಾಗಿಯಾಗೇ ಇಲ್ಲ. ಕಷ್ಟದಿಂದ ಬೆಳೆದು ಬಂದಿದ್ದೇನೆ. ನಾನು, ನಮ್ಮ ತಾಯಿ ಇಬ್ಬರೇ ಇದ್ದೇವೆ. ಕಡು ಬಡತನದಲ್ಲೇ ಓದಿ, ಪಿಎಸ್ ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ಮೊದಲ Rank ಪಡೆದಿದ್ದೇನೆ. ಆದರೆ ಸರ್ಕಾರ ಮರು ಪರೀಕ್ಷೆ ಆದೇಶ ಕೇಳಿ ಆತಂಕ ಗೊಂಡಿದ್ದೇನೆ ಎಂದು ಹೇಳಿದ್ದರು.

- Advertisement -


ಇದೀಗ ರಚನಾ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ. ಅವರ ಒಎಂಆರ್ ಶೀಟ್ ಹಾಗೂ ಕಾರ್ನ್ ಶೀಟ್ ನಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ, ಅವರ ವಿರುದ್ಧವೂ ಸಿಐಡಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪರಿಣಾಮ, ಎಫ್ ಐಆರ್ ದಾಖಲಾಗಿದೆ. ಇವರಷ್ಟೇ ಅಲ್ಲದೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಾಗೃತ್ ಸೇರಿದಂತೆ 22 ಮಂದಿಯ ವಿರುದ್ಧವೂ ದೂರು ದಾಖಲಾಗಿದೆ.



Join Whatsapp