‘ಸಂಸ್ಕೃತ’ ರಾಷ್ಟ್ರ ಭಾಷೆಯಾಗಬೇಕು: ನಟಿ ಕಂಗನಾ ರಣಾವತ್

Prasthutha|

ಮುಂಬೈ: ಹಿಂದಿಗಿಂತ ಸಂಸ್ಕೃತ ಹಳೆಯದಾಗಿದೆ. ಹಾಗಾಗಿ ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

- Advertisement -

ತಮ್ಮ ಮುಂಬರುವ ಚಿತ್ರ ‘ಧಕ್ಕಡ್’ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ಹಕ್ಕಿದೆ. ಆದರೆ, ನಮ್ಮ ದೇಶ ಸಾಂಸ್ಕೃತಿಕವಾಗಿ ಮತ್ತು ಭಾಷೆಯಲ್ಲಿ ಬಹಳ ವೈವಿಧ್ಯಮಯವಾಗಿದೆ. ಆದ್ದರಿಂದ ಅವುಗಳನ್ನು ತರಲು ನಮಗೆ ಒಂದು ಸಾಮಾನ್ಯ ಭಾಷೆ ಬೇಕು. ಭಾರತೀಯ ಸಂವಿಧಾನ ರಚನೆಯಾದಾಗ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲಾಗಿತ್ತು. ಈಗ ನೋಡಿ ತಾಂತ್ರಿಕವಾಗಿ ಹೇಳುವುದಾದರೆ ಹಿಂದಿಗಿಂತ ತಮಿಳು ಹಳೆಯ ಭಾಷೆಯಾಗಿದೆ. ಆದರೆ ಅತ್ಯಂತ ಹಳೆಯದು ಸಂಸ್ಕೃತ ಭಾಷೆ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವೇ ರಾಷ್ಟ್ರವಾಗಬೇಕು. ಹಿಂದಿಯಲ್ಲ ಎಂದಿದ್ದಾರೆ.



Join Whatsapp