ನನ್ನ ಮೇಲಿನ ಆರೋಪಗಳೆಲ್ಲವೂ ಸತ್ಯಕ್ಕೆ ದೂರ: ಶಾಸಕ ಝಮೀರ್

Prasthutha|

ಬೆಂಗಳೂರು: ಹುಬ್ಬಳ್ಳಿ ಗಲಭೆಯಲ್ಲಿ  ಬಂಧಿತ ಕುಟುಂಬಗಳಿಗೆ  5 ಸಾವಿರ ನಗದು ಹಾಗೂ ರಂಜಾನ್ ಫುಡ್‌ ಕಿಟ್ ನೀಡಿ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ ಶಾಸಕ ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಏಪ್ರಿಲ್ 17ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮೆಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿದ್ದ ಝಮೀರ್, ರಂಜಾನ್ ಹಬ್ಬದ ಸಮಯದಲ್ಲಿ ಪವಿತ್ರ ನಮಾಜ್ ವೇಳೆ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಲಿ. ಜೊತೆಗೆ ಮತ್ತೊಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾಹ್ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮೆಕ್ಕಾದಲ್ಲಿ ಪವಿತ್ರ ರಂಜಾನ್ ಆಚರಣೆ ಸೇವೆಯಲ್ಲಿ ತೊಡಗಿದ್ದೇನೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನೆಲೆಯಲ್ಲಿ ತಾಯಂದಿರಿಗೆ ಪುಟ್ಟ ಮಕ್ಕಳಿಗೆ ಸಹಾಯಹಸ್ತ ನೀಡಲಾಗುತ್ತಿದೆ. ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ನನ್ನ ಸಹಾಯಹಸ್ತ ಯಾವುದೇ ರೀತಿಯ ತಪ್ಪಿತಸ್ಥರಿಗೆ ಸಹಾಯ ಅಲ್ಲ ಹಾಗೂ ಉತ್ತೇಜನವೂ ಅಲ್ಲ ಎಂದು ಹೇಳಿದ್ದರು.



Join Whatsapp