ಬಸ್ ನಲ್ಲಿ 1.27 ಲಕ್ಷ ರೂ. ಮೌಲ್ಯದ ಮದ್ಯ ವಶ: ಇಬ್ಬರು ಅರೆಸ್ಟ್

Prasthutha|

ಕಾರವಾರ: KSRTC  ಬಸ್‍ ನಲ್ಲಿ 1.27 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

- Advertisement -

ಶಿವಮೊಗ್ಗ ಮೂಲದ ನಾಗರಾಜ ಹಾಗೂ ಸಾಗರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ನಾಗರಾಜ ಹಾಗೂ ಸಾಗರ್ ಗೋವಾದಿಂದ ಶಿವಮೊಗ್ಗಕ್ಕೆ ಬ್ಯಾಗ್‍ ನಲ್ಲಿ ವಿವಿಧ ಬ್ರಾಂಡ್‍ ನ ಮದ್ಯವನ್ನು ತುಂಬಿಕೊಂಡು ಬಸ್‍ ನಲ್ಲಿ ತೆರಳುತಿದ್ದರು. ಈ ವೇಳೆ ತಪಾಸಣೆ ನಡೆಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 



Join Whatsapp