ಬ್ರಿಟನ್: ಮೋದಿ ನೇತೃತ್ವದ ಬಿಜೆಪಿಯು ಮುಸ್ಲಿಮರ ಮನೆ ಮತ್ತು ಅಂಗಡಿಗಳನ್ನು ದ್ವಂಸಗೈಯ್ಯಲು ಜೆಸಿಬಿಗಳನ್ನು ಬಳಸುತ್ತಿದ್ದು, ಬಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೋದಿಯ ಮುಸ್ಲಿಮ್ ವಿರೋಧಿ ನೀತಿಯನ್ನು ಪ್ರಶ್ನಿಸಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ ಲೇಬರ್ ಪಕ್ಷದ ಸಂಸದೆ ನಾದಿಯಾ ವಿಟ್ಟೋಮ್, ಬ್ರಿಟನ್ ಪ್ರಧಾನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬ್ರಿಟನ್ ಪ್ರಧಾನಿ ಬೋರಿಸಿ ಜಾನ್ಸನ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಗುಜರಾತಿನ ಕಂಪೆನಿಯೊಂದರ ಜೆಸಿಬಿಗೆ ಹತ್ತಿಕೊಂಡು ಪೋಸ್ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಜಾನ್ಸನ್, ಮೋದಿ ಅವರೊಂದಿಗೆ ದ್ವಂಸದ ಕುರಿತು ಪ್ರಶ್ನಿಸಿದ್ದಾರೆಯೇ ಎಂದು ನಾದಿಯಾ ವಿಟ್ಟೋಮ್ ಕೇಳಿದ್ದಾರೆ.
ಈ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಅವರು, ಬ್ರಿಟನ್ ಪ್ರಧಾನಿ ಭಾರತ ಭೇಟಿಯ ವೇಳೆ ಗುಜರಾತಿನ ಫ್ಯಾಕ್ಟರಿಯಲ್ಲಿ ಜೆಸಿಬಿಗೆ ಹತ್ತಿಕೊಂಡು ಪೋಟೋ ಕ್ಲಿಕ್ಕಿಸಿರುವುದು ಗೊತ್ತಾಗಿದೆ. ಈ ಹಿಂದೆ ಜೆಸಿಬಿಯನ್ನು ಬಳಸಿಕೊಂಡು ಬಿಜೆಪಿಯು, ದೆಹಲಿಯಲ್ಲಿರುವ ಮುಸ್ಲಿಮರ ಅಂಗಡಿ, ಮಸೀದಿಯ ಗೇಟ್ ಮತ್ತು ಮನೆಗಳನ್ನು ದ್ವಂಸಗೊಳಿಸಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯಾಡಳಿತ ಕೂಡ ಇನ್ನೂ ಹಲವು ಮನೆ, ಅಂಗಡಿಗಳನ್ನು ದ್ವಂಸಗೊಳಿಸಿದೆ ಎಂಬ ಅಂಶವನ್ನು ಅವರು ಸಂಸತ್ತಿನಲ್ಲಿ ಉಲ್ಲೇಖಿಸಿದ್ದಾರೆ.
ಈ ನಿಟ್ಟಿನಲ್ಲಿ ಮೋದಿ ಸರ್ಕಾರದ ಈ ಅಮಾನವೀಯ ನಡೆಯನ್ನು ಜಾನ್ಸನ್ ಪ್ರಶ್ನಿಸಿದ್ದಾರೆಯೇ ಎಂದು ಅವರು ಕೇಳಿದ್ದಾರೆ. ಇಲ್ಲಾ ಎಂದಾದರೇ ಯಾಕೆ ಎಂದು ನಾದಿಯಾ, ಬ್ರಿಟನ್ ಪ್ರಧಾನಿಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಬೋರಿಸ್ ಜಾನ್ಸನ್ ಅವರ ಭೇಟಿ, ಭಾರತದ ಪ್ರಧಾನಿ ಮೋದಿ ಸರ್ಕಾರದ ಅಲ್ಪಸಂಖ್ಯಾತ ವಿರೋಧಿ ಕ್ರಮವನ್ನು ಕಾನೂನುಬದ್ಧಗೊಳಿಸಲು ನೆರವಾಗಿದ್ದಾರೆ ಎಂದು ಅವರು ಒಪ್ಪಿಕೊಳ್ಳುತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರೋರ್ವರು, ತಾರತಮ್ಯದ ಯಾವುದೇ ಪ್ರಕರಣವನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.