ಬೆಂಗಳೂರು:-ಖಾಸಗಿ ಕಂಪನಿಯ ಲೆಕ್ಕಪರಿಶೋಧಕರೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ ಮಾಡಿರುವ ದುರ್ಘಟನೆ ಯಶವಂತಪುರದ ಎಂಕೆ ನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಎಂಕೆ ನಗರದ ಖಾಸಗಿ ಕಂಪನಿಯ ಲೆಕ್ಕಪರಿಶೋಧಕ ಶಂಕರ್ ರೆಡ್ಡಿ (35) ಕೊಲೆಯಾದವರು.ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಶಂಕರ್ ರೆಡ್ಡಿ ಅವರನ್ನು ಚಾಕುವಿನಿಂದ ಇರಿದು ತಡರಾತ್ರಿ ಕೊಲೆಮಾಡಲಾಗಿದೆ.
ಮನೆಯಲ್ಲಿ ಪತ್ನಿ 7ಹಾಗೂ 5ವರ್ಷದ ಇಬ್ಬರು ಮಕ್ಕಳಿದ್ದಾಲೇ ಶಂಕರ್ ರೆಡ್ಡಿ ಕೊಲೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ಕಪಕ್ಕದ ಮನೆಯವರಿಂದ ಕೊಲೆ ಕೃತ್ಯ ಬೆಳಕಿಗೆ ಬಂದಿದ್ದು ಕೃತ್ಯ ನಡೆದ ಸ್ಥಳಕ್ಕೆ ಯಶವಂತಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.