ಕೈ ನಾಯಕರ ವಿರೋಧ: ಹುಬ್ಬಳ್ಳಿ ಸಂತ್ರಸ್ತರ ರೇಷನ್ ಸಹಾಯಕ್ಕೆ ಬ್ರೇಕ್ ಹಾಕಿದ ಶಾಸಕ ಝಮೀರ್

Prasthutha|

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆಯಲ್ಲಿ ಬಂಧನಕ್ಕೀಡಾಗಿರುವ ಕುಟುಂಬಕ್ಕೆ ಆಹಾರ ಕಿಟ್ ಹಾಗೂ 5 ಸಾವಿರ ಧನ ಸಹಾಯ ಮಾಡಲು ಶಾಸಕ ಝಮೀರ್ ಅಹ್ಮದ್ ಮುಂದೆ ಬಂದಿದ್ದರು. ಆದರೆ ಇದೀಗ ಕೈ ನಾಯಕರು ಶಾಸಕ ಝಮೀರ್ ಸಹಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಸಂತ್ರಸ್ತರ ರೇಷನ್ ಮತ್ತು ಧನ ಸಹಾಯಕ್ಕೆ ಬ್ರೇಕ್ ಹಾಕಿದ್ದಾರೆ.

- Advertisement -

ಬಂಧಿತರಾದವರ ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಕಷ್ಟ ಆಗಬಾರದು, ಕುಟುಂಬದಲ್ಲಿ ದುಃಖವಿರಬಾರದು ಎಂದು ತಾಯಂದಿರಿಗೆ, ಹೆಣ್ಣುಮಕ್ಕಳಿಗೆ, ಪುಟ್ಟ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಜಮೀರ್ ಹೇಳಿದ್ದರು. ಆದರೆ ಕೈ ಪಾಳಯದಲ್ಲಿ ಝಮೀರ್ ನಡೆಗೆ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕಿಟ್ ವಿತರಣೆಯನ್ನು ನಡೆಸದಂತೆ ಶಾಸಕ ಝಮೀರ್ ತನ್ನ ಬೆಂಬಲಿಗರಿಗೆ ಸೂಚಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್, ಝಮೀರ್ ನಡೆ ನನಗೆ ಸರಿ ಅನ್ನಿಸುತ್ತಿಲ್ಲ ಎಂದು ಹೇಳಿದ್ದರು.

ಝಮೀರ್ ಸಹಾಯ ಹಸ್ತದ ಕುರಿತು ರಾಜ್ಯದ ಮಾಧ್ಯಮಗಳು ಕೂಡ ತಿರುಚಿ ಪ್ರಸಾರ ಮಾಡಿತ್ತು. ಬಂಧನಕ್ಕೀಡಾದ ಕುಟುಂಬಿಕರು ಕಷ್ಟ ಅನುಭವಿಸದಂತೆ ಕಿಟ್ ನೀಡುತ್ತಿದ್ದೇನೆಂದು ಶಾಸಕರು ಸ್ಪಷ್ಟನೆ ನೀಡಿದ್ದರೂ ಮಾಧ್ಯಮಗಳು, ಕಲ್ಲು ಹೊಡೆದವರಿಗೆ ಶಾಸಕನ ನೆರವು ಎಂಬಿತ್ಯಾದಿ ವಿಭಿನ್ನ ಶೀರ್ಷಿಕೆಗಳನ್ನು ನೀಡಿ ಝಮೀರ್’ರನ್ನು ತೇಜೊವಧೆ ನಡೆಸುವ ಪ್ರಯತ್ನಕ್ಕೆ ಇಳಿದಿತ್ತು.



Join Whatsapp