ರಂಝಾನ್ ಹಿನ್ನೆಲೆ: ಹುಬ್ಬಳ್ಳಿ ಗಲಭೆಯ ಬಂಧಿತರ ಕುಟುಂಬಸ್ಥರಿಗೆ ಶಾಸಕ ಝಮೀರ್ ಸಹಾಯ

Prasthutha|

ಹುಬ್ಬಳ್ಳಿ: ವಾಟ್ಸಾಪ್ ವಿಚಾರವಾಗಿ ನಡೆದಿದ್ದ ವಿವಾದ ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಬಳಿಕ ಪೊಲೀಸರು ಹಳೆ ಹುಬ್ಬಳ್ಳಿಯ 150ಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಿದ್ದರು. ಪೊಲೀಸರು ಹಲವು ಅಮಾಯಕರನ್ನು ಗಲಭೆಯ ರೂವಾರಿಗಳೆಂದು ಚಿತ್ರಿಸಿ ಬಂಧಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

- Advertisement -

ಇದೀಗ ಪ್ರಕರಣದಲ್ಲಿ ಬಂಧಿತರಾದವರ ಕುಟುಂಬಸ್ಥರಿಗೆ ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಪ್ರತಿ ಕುಟುಂಬಕ್ಕೂ ಆಹಾರ ಕಿಟ್ ಹಾಗೂ 5 ಸಾವಿರ ಧನ ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಕಷ್ಟ ಆಗಬಾರದು, ಕುಟುಂಬದಲ್ಲಿ ದುಃಖವಿರಬಾರದು ಎಂದು ತಾಯಂದಿರಿಗೆ, ಹೆಣ್ಣುಮಕ್ಕಳಿಗೆ, ಪುಟ್ಟ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಜಮೀರ್ ಹೇಳಿದ್ದಾರೆ.

ಈ ಸಹಾಯ ಪುಟ್ಟ ಮಕ್ಕಳು ವರ್ಷಕ್ಕೊಮ್ಮೆ ಬರುವ ಪವಿತ್ರ ರಂಝಾನ್ ಹಬ್ಬವನ್ನು ಆಚರಣೆ ಮಾಡಲಿ ಎಂದಷ್ಟೆ. ಇಂದು ಸಂಜೆ ನಾಲ್ಕು ಗಂಟೆಗೆ ಮಸ್ತಾನ ಶಾದಿ ಮಹಲ್’ನಲ್ಲಿ ಆಹಾರ ಕಿಟ್ ಹಾಗೂ ಸಹಾಯಧನ ವಿತರಣೆಯನ್ನು ಝಮೀರ್ ಮಾಡಲಿದ್ದಾರೆ.



Join Whatsapp