ಈಶಾನ್ಯ ರಾಜ್ಯದಿಂದ AFSPA ಕಾಯ್ದೆ ಹಿಂಪಡೆಯಲು ಪ್ರಯತ್ನಿಸಲಾಗುವುದು: ಪ್ರಧಾನಿ ಮೋದಿ

Prasthutha|

ನವದೆಹಲಿ: ಈಶಾನ್ಯ ರಾಜ್ಯಗಳಿಂದ AFSPA ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

- Advertisement -

ಶಾಂತಿ, ಏಕತೆ ಮತ್ತು ಅಭಿವೃದ್ಧಿ ಕುರಿತ ರ್ಯಾ ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿರುವುದರಿಂದ ಭಾರತದ ವಿವಿಧ ಭಾಗಗಳಿಂದ AFSPA ಕಾಯ್ದೆಯನ್ನು ಹಿಂಪಡೆಯಲು ಸೂಕ್ತ ಸಮಯ ಎಂದು ಅವರು ತಿಳಿಸಿದ್ದಾರೆ.

AFSPA ಕಾಯ್ದೆ ಅಡಿಯಲ್ಲಿ ಹೇರಿಕೆಯಿಂದ ತೊಂದರೆಕ್ಕೊಳಗಾದ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಮ್ ಮತ್ತು ಮಣಿಪುರದಲ್ಲಿ ದಶಕದ ಬಳಿಕ ಏಪ್ರಿಲ್ 1 ರಿಂದ ಈ ಕಾಯ್ದೆಗಳನ್ನು ಕಡಿತಗೊಳಿಸುವುದಾಗಿ ಕೇಂದ್ರ ಘೋಷಿಸಿತ್ತು.

- Advertisement -

ಅಸ್ಸಾಂನ ಕರ್ಬಿ ಅಂಗ್ಲಾಂಗ್ ಮತ್ತು ತ್ರಿಪುರಾದಲ್ಲಿ ಸರ್ಕಾರವು ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಇಡೀ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.



Join Whatsapp