ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಚಿಂತನೆಇಲ್ಲ; ನಾನು ಯಾರು, ಏನು ಎಂಬುದು ಜನರಿಗೆ ಗೊತ್ತಿದೆ: ಮಹಿಂದಾ ರಾಜಪಕ್ಸೆ

Prasthutha|

ಕೊಲಂಬೊ: ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳ ನಡುವೆಯೇ, ತಾನು ರಾಜೀನಾಮೆ ನೀಡುವುದಿಲ್ಲ ಎಂದು ಮಹಿಂದಾ ರಾಜಪಕ್ಸೆ ಹೇಳಿದ್ದಾರೆ.

- Advertisement -

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕುರಿತಾದ ಸುದ್ದಿಗಳೆಲ್ಲಾ ಸುಳ್ಳು. ರಾಜೀನಾಮೆ ನೀಡುವ ಯಾವುದೇ ಯೋಜನೆ ಇಲ್ಲ. ದೇಶದ ಬಿಕ್ಕಟ್ಟನ್ನು ಪರಿಹರಿಸಲು ಅಧ್ಯಕ್ಷರು ಮತ್ತು ನಾನು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಧ್ಯಕ್ಷನಾಗಿರುವ ಕಿರಿಯ ಸಹೋದರ  ಗೋಟಬಯ ರಾಜಪಕ್ಸೆ ತನ್ನೊಂದಿಗೆ ರಾಜೀನಾಮೆ ನೀಡುವಂತೆ ಹೇಳಲಿಲ್ಲ. ನನಗೆ ಆತನೊಂದಿಗೆ ಯಾವುದೇ ಮುನಿಸು ಇಲ್ಲ. ಗೋಟಬಯ ರಾಜಪಕ್ಸೆ ನನ್ನ ಕಿರಿಯ ಸಹೋದರನಾಗಿರಬಹುದು. ಇದು ವೈಯಕ್ತಿಕ ಸಂಬಂಧವಾಗಿದೆ . ಈಗ ಅವರು ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಹಾಗಾಗಿ ನಾನು ಅವನನ್ನು ಗೌರವಿಸಬೇಕು  ಎಂದು ಮಹಿಂದಾ ಆರೋಪಗಳನ್ನು ನಿರಾಕರಿಸಿದರು.

- Advertisement -

ನಾನು ಯಾರು, ಏನು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜನ ನನಗೆ ಮತ ಹಾಕುವ ಭರವಸೆಯಿದೆ ಎಂದು ಹೇಳಿದರು.



Join Whatsapp