ಮೂರು ವರ್ಷ ಕಳೆದರೂ ಸಿಗದ ಪರಿಹಾರ: ದಯಾಮರಣ ಕೋರಿ ಚಿಕ್ಕಮಗಳೂರು ನೆರೆ ಸಂತ್ರಸ್ತರಿಂದ ಅರ್ಜಿ

Prasthutha|

ಚಿಕ್ಕಮಗಳೂರು: ಮೂರು ವರ್ಷ ಕಳೆದರೂ ಚಿಕ್ಕಮಗಳೂರಿನ ನೆರೆ ಸಂತ್ರಸ್ತರಿಗೆ ಸರಕಾರದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತರು ರಾಷ್ಟ್ರಪತಿಗೆ ದಯಾಮರಣಕ್ಕೆ ಕೋರಿ ಮನವಿ ಸಲ್ಲಿಸಿದ್ದಾರೆ.2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 5 ಮನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದವು. ಈ ಸಂಬಂಧ ಇದುವರೆಗೂ ಸರಕಾರದಿಂದ ಯಾವುದೇ ಪರಿಹಾರ ದೊರಕದೇ ಕಂಗಾಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೊವಿಂದ್’ಗೆ ಪತ್ರ ಪರೆದಿದ್ದಾರೆ.

- Advertisement -


ಪ್ರವಾಹದ ವೇಳೆ ಮನೆ ಸೇರಿದಂತೆ ತೋಟ-ಗದ್ದೆಗಳು ನಾಶವಾಗಿದ್ದವು, ಆ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಬಳಿಕ ಪರಿಹಾರಕ್ಕಾಗಿ ಸಂತ್ರಸ್ತರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿಗಳಿಗೆ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. ಸತತ ಮೂರು ವರ್ಷ ಹೋರಾಟ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ ಮಾಡಿದ್ದಾರೆ.


ಪರಿಹಾರಕ್ಕಾಗಿ ಎಲ್ಲಾ ಕಚೇರಿಗಳಿಗೂ ಅಲೆದಾಡಿದ್ದೇವೆ, ಇನ್ನು ನಮ್ಮ ಕೈಯಲ್ಲಿ ಏನೂ ಇಲ್ಲ, ಮೂರು ವರ್ಷವಾದರೂ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ಥರ ಸಮಸ್ಯೆಗೆ ನ್ಯಾಯಯುತವಾಗಿ ಪರಿಹಾರ ಕೊಡಿಸುವ ಮನಸ್ಸು ಮಾಡಿಲ್ಲ, ಇವರ ಜೊತೆ ಭಿಕ್ಷೆ ಬೇಡುವುದಕ್ಕಿಂತ ಸಾಯುವುದೇ ಲೇಸು ಅಂತ ಸಂತ್ರಸ್ತರೊಬ್ಬರು ಅಳಲು ತೋಡಿಕೊಂಡಿದ್ದಾರೆ.



Join Whatsapp