ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು 3.36 ಲಕ್ಷ ಕೋಟಿಗೆ ಖರೀದಿಸಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟ್ಟರ್ ನಲ್ಲಿ ಶೇ.9.2ರಷ್ಟು ಷೇರು ಹೊಂದಿದ್ದರು. ನಂತರ ಪ್ರತಿ ಷೇರಿಗೆ 54.20 ಡಾಲರ್ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಮಸ್ಕ್ ಖರೀದಿ ಪ್ರಸ್ತಾಪಕ್ಕೆ ಟ್ವಿಟ್ಟರ್ ಆಡಳಿತ ಮಂಡಳಿ ಒಪ್ಪಿದೆ. ವ್ಯಾಪಾರಕ್ಕೆ ಅಂತಿಮ ಮುದ್ರೆ ಕೂಡ ಬಿದ್ದಿದೆ.
ಏ.14ರಂದು ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಮಸ್ಕ್ ಸುದ್ದಿಯಾಗಿದ್ದಾರೆ.