ಕರಗ ನೋಡಲು ಬಂದ ಯುವಕ ಬರ್ಬರ ಹತ್ಯೆ

Prasthutha|

ಬೆಂಗಳೂರು: ಕರಗ ನೋಡಲು ಬಂದ ಯುವಕನೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಆಕ್ರೋಶಗೊಂಡು ಚಾಕುವಿನಿಂದ ಇರಿದು ಕೊಲೆಗೈದಿರುವ ದುರ್ಘಟನೆ ಕೆಂಗೇರಿಯ ಹರ್ಷ ಲೇಔಟ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

- Advertisement -


ಹರ್ಷ ಲೇಔಟ್ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಎಂಟಿಎಸ್ ಲೇಔಟ್ ನಿವಾಸಿ ಭರತ್ (20) ಎಂಬಾತನನ್ನು ಕೊಲೆ ಮಾಡಲಾಗಿದೆ
ಟಿವಿ ಶೋ ರೂಮ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್, ಇಬ್ಬರು ಸ್ನೇಹಿತರೊಂದಿಗೆ ರಾತ್ರಿ ಕೆಂಗೇರಿ ಕರಗ ನಡೆಯುತ್ತಿರುವುದನ್ನು ನೋಡಲು ಬಂದಿದ್ದ.


ಈ ವೇಳೆ ಯುವಕನೊಬ್ಬ ಬರುತ್ತಿದ್ದ ಡಿಯೋ ಸ್ಕೂಟರ್ ಭರತ್ ಕೈಗೆ ತಾಗಿದೆ. ಕೋಪಗೊಂಡ ಭರತ್ ಯುವಕನಿಗೆ ಸ್ಕೂಟರ್ ತಡೆದು ನೋಡಿಕೊಂಡು ಸ್ಕೂಟರ್ ಚಲಾಯಿಸುವಂತೆ ಬುದ್ದಿ ಹೇಳಿದ್ದಾನೆ. ಈ ವೇಳೆ ಯುವಕ ಮತ್ತು ಭರತ್ ನಡುವೆ ಮಾತಿನ ಚಕಮಕಿ ನಡೆದಿದ್ದು ನಿನ್ನ ನೋಡಿಕೊಳ್ತೀನಿ ಎಂದು ಯುವಕ ಹೇಳಿ ಹೋಗಿದ್ದ. ಸ್ವಲ್ಪ ಸಮಯದ ಬಳಿಕ ತನ್ನ ಹತ್ತಕ್ಕೂ ಹೆಚ್ಚು ಯುವಕರ ಗ್ಯಾಂಗ್ ಕರೆದುಕೊಂಡು ಬಂದ ಯುವಕ ಭರತ್ ಜೊತೆ ಕಿರಿಕ್ ಮಾಡಿಕೊಂಡು ಚಾಕುವಿನಿಂದ ಇರಿದು ಭರತ್ ನನ್ನು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಸಿಟಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



Join Whatsapp