ಮುಸ್ಲಿಮರನ್ನು ಪಾಕಿಸ್ತಾನಿ, ಉಗ್ರಗಾಮಿ ಎನ್ನುವುದು ಸರಿಯಲ್ಲ ಎಂದ ಮಾಜಿ ಸಚಿವ ಈಶ್ವರಪ್ಪ

Prasthutha|

ಶಿವಮೊಗ್ಗ: ಕಮಿಷನ್ ಆರೋಪಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ ಎಸ್ ಈಶ್ವರಪ್ಪ, ಮುಸ್ಲಿಮರನ್ನು ಕಂಡ ಕೂಡಲೇ ಅವರನ್ನು ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.

- Advertisement -

ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಮುಸ್ಲಿಮರನ್ನು ನಾವು ಪಾಕಿಸ್ತಾನಿ, ಉಗ್ರಗಾಮಿ ಎನ್ನುವ ಭಾವನೆಗಳನ್ನು ದೂರ ತಳ್ಳಿ, ಅವರನ್ನು ನಮ್ಮೊಂದಿಗೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.

ದೇಶದ ಎಲ್ಲಾ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ, ಕಾಂಗ್ರೆಸ್ ಪಕ್ಷ ಹಿಂದೂ, ಮುಸಲ್ಮಾನರನ್ನು  ವಿಂಗಡಿಸಿ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಿದೆ. ಇವರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp