ಅಪ್ರಾಪ್ತೆಯ ಮೇಲೆ ಆರು ಮಂದಿ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ !

Prasthutha|

ಜಾರ್ಖಂಡ್: ಅಪ್ರಾಪ್ತ ಬಾಲಕಿ ಮೇಲೆ 6 ಮಂದಿ ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಘಟನೆ ಇಲ್ಲಿನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ. 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ರಿಂದ 15 ವರ್ಷದೊಳಗಿನ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

ನೃತ್ಯ ಕಾರ್ಯಕ್ರಮಕ್ಕೆಂದು ಬಾಲಕಿ ಪಕ್ಕದ ಊರಿಗೆ ತೆರಳಿದ್ದು, ಇದೇ ವೇಳೆ ಬಾಲಕರೊಂದಿಗೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಆ ಬಳಿಕ ಬಾಲಕಿ ಸ್ನೇಹಿತರೊಂದಿಗೆ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದಿರುವ ಅಪ್ರಾಪ್ತ ಹುಡುಗರ ತಂಡ ಆಕೆಯನ್ನು ತಡೆದು ಏಕಾಂಗಿ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಬಳಿಕ ಪೋಷಕರು ಹೆದರಿ ಈ ಕುರಿತಂತೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ, ಆದರೆ ಆ ಬಳಿಕ ಗುರುವಾರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ಈ ಕುರಿತಂತೆ ತನಿಖೆ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.



Join Whatsapp