300 ವರ್ಷ ಇತಿಹಾಸವಿರುವ ಶಿವ ದೇವಾಲಯ ಧ್ವಂಸ; ರಾಜಸ್ಥಾನದಲ್ಲಿ ಕಣಕ್ಕಿಳಿದ ಕಾಂಗ್ರೆಸ್ ಬುಲ್ಡೋಝರ್

Prasthutha|

ಅಲ್ವಾರ್: ಅಲ್ವಾರ್ ಜಿಲ್ಲೆಯಲ್ಲಿ ರಸ್ತೆಗಾಗಿ 300 ವರ್ಷಗಳ ಐತಿಹಾಸಿಕ ಶಿವನ ದೇವಸ್ಥಾನದ ಜೊತೆಗೆ 86 ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದ್ದು  ಈ ಮೂಲಕ ಅಕ್ರಮ ತೆರವು ನೆಪದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಕಾಂಗ್ರೆಸ್ ಪಕ್ಷವೂ ಕೈ ಹಾಕಿದೆ.

- Advertisement -

ಕೋಮು ಸಂಘರ್ಷಕ್ಕೆ ಉತ್ತೇಜನ ನೀಡುವ ಮತ್ತು ಗಲಭೆಗೆ ಪ್ರೇರೇಪಿಸುವುದಕ್ಕೆ ಸಂಬಂಧಿಸಿದಂತೆ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿರುವ ಸಾಲಿನಲ್ಲಿ ಬಿಜೆಪಿ ಮುಂದಿತ್ತು. ಈಗ ಅದೇ ಸಾಲಿನಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡಿದೆ.

ರಾಜಸ್ಥಾನದಲ್ಲಿ ಈ ಹಿಂದೆ ವಸುಂಧರಾ ರಾಜೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಗೌರವ್ ಪಥ್ ಎಂಬ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿತ್ತು ಎಂದು ಕಾಂಗ್ರೆಸ್ ದೂಷಿಸುತ್ತಿದೆ. ರಾಜ್ ಗಢ ಪಟ್ಟಣದ ಪುರಸಭೆಯು ಬಿಜೆಪಿ ಹಿಡಿತದಲ್ಲಿದ್ದ 2021ರ ಸೆಪ್ಟೆಂಬರ್ ನಲ್ಲಿ ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡುವ ನಿರ್ಣಯಕ್ಕೆ ಅಂಗೀಕಾರ ನೀಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ ಗಢ ಮುನಿಸಿಪಲ್ ಕೌನ್ಸಿಲ್ ನಲ್ಲಿ 35 ಸದಸ್ಯರಿದ್ದು, ಅದರಲ್ಲಿ 34 ಮಂದಿ ಬಿಜೆಪಿಯವರು ಎಂದು ಕಾಂಗ್ರೆಸ್ ಹೇಳುತ್ತಿದ್ದು  ಅಕ್ರಮ ತೆರವು ಕಾರ್ಯಾಚರಣೆಗೆ ಆದೇಶ ನೀಡಿದ್ದೇ ಬಿಜೆಪಿ ಎಂದು ದೂಷಿಸಿದೆ.

- Advertisement -

ರಾಜ್ ಗಢ್ ಪಟ್ಟಣದ ಮುನ್ಸಿಪಲ್ ಕೌನ್ಸಿಲ್ ಸಂಪೂರ್ಣವಾಗಿ ಬಿಜೆಪಿ ಅಧಿಕಾರದಲ್ಲಿದೆ. ಇದು ನಗರ ಯೋಜನೆ ಸಮಸ್ಯೆಗಳನ್ನು ನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ತೆರವು ಕಾರ್ಯಾಚರಣೆಗೆ ಬಿಜೆಪಿಯೇ ಆದೇಶಿಸಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹೇಳುತ್ತದೆ.

“ಇದು ಪುರಸಭೆಯ ನಿರ್ಧಾರ. ರಾಜ್ಯ ಸರ್ಕಾರಕ್ಕೂ ಈ ತೆರವು ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ಅವರು ಸರ್ಕಾರದಿಂದ ಯಾವುದೇ ನಿರ್ದೇಶನ ಕೇಳಲಿಲ್ಲ. ನಮ್ಮಿಂದ ಯಾವುದೇ ನಿರ್ದೇಶನವನ್ನು ಪಡೆದಿಲ್ಲ” ಎಂದು ರಾಜಸ್ಥಾನದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಸಚಿವ ಶಾಂತಿ ಧರಿವಾಲ್ ಸ್ಪಷ್ಟನೆ ನೀಡಿದ್ದಾರೆ.



Join Whatsapp