ಬೆಳಗಾವಿ: ಮುಂಬರುವ ಬೆಳಗಾವಿ ಲೋಕಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದವರಿಗೆ ಪಕ್ಷ ಟಿಕೆಟ್ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
“ಬೆಳಗಾವಿ ಹಿಂದುತ್ವದ ಕೆಂದ್ರವಾಗಿದ್ದು, ಇಲ್ಲಿ ಶಂಕರಾಚಾರ್ಯ, ರಾಣಿ ಚೆನ್ನಚ್ಚ ಇಲ್ಲವೇ ಸಂಗೊಳ್ಳಿರಾಯಣ್ಣನ ಶಿಷ್ಯರಿಗೆ ಟಿಕೆಟ್ ಕೊಡುತ್ತೇವೆ ಹೊರತು ಮುಸ್ಲಿಮರಿಗೆ ಕೊಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಡಿ.4ರಂದು ಇಲ್ಲಿ ಸಮನ್ವಯ ಸಮಿತಿ ಸಭೆ ಮತ್ತು ಡಿ.5ರಂದು ರಾಜ್ಯಕಾರ್ಯಕಾರಿಣಿ ಸಭೆ ನಡೆಯಲಿದ್ದು, ಯಾವ ಹಿಂದೂವಿಗೆ ಟಿಕೆಟ್ ನೀಡಬೇಕೆಂದು ಅಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.