ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ: ದೆಹಲಿಯಲ್ಲಿ ಉಚಿತ ಬೂಸ್ಟರ್ ಡೋಸ್

Prasthutha|

ಹೊಸದಿಲ್ಲಿ: ರಾಜಧಾನಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 18-59 ವರ್ಷದವರಿಗೆ ಉಚಿತ ಬೂಸ್ಟರ್ ಡೋಸ್ ನೀಡುವುದಾಗಿ ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ಈ ಬಗ್ಗೆ ಆದೇಶ ಹೊರಡಿಸಿರುವ ಕೇಜ್ರಿವಾಲ್ ಸರ್ಕಾರ “ದೆಹಲಿಯ ಎಲ್ಲ ಅರ್ಹ ಫಲಾನುಭವಿಗಳಿಗೆ ಉಚಿತ ಮುಂಜಾಗ್ರತಾ ಡೋಸ್ನತ ಪ್ರಯೋಜನ ನೀಡುವ ಸಲುವಾಗಿ, 18 ರಿಂದ 59 ವರ್ಷದ ವರೆಗಿನ ವ್ಯಕ್ತಿಗಳಿಗೆ ಎಲ್ಲ ಸರ್ಕಾರಿ ಸಿವಿಸಿಗಳಲ್ಲಿ ಎ. 21ರಿಂದ ಉಚಿತ ಡೋಸ್ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದೆ.

ಈ ಆದೇಶದ ಬೆನ್ನಲ್ಲೇ ದೆಹಲಿಗೆ ಸಂಬಂಧಿಸಿದಂತೆ ಕೋವಿನ್ ಪೋರ್ಟೆಲ್ ನಲ್ಲಿಅಗತ್ಯ ಬದಲಾವಣೆ ಮಾಡಲಾಗಿದ್ದು, ಆನ್ಲೈನ್ ಅಪಾಯಿಂಟ್‍ ಮೆಂಟ್ ಮತ್ತು ನೇರವಾಗಿ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

- Advertisement -

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಡೋಸ್ಗ ಳ ದರವನ್ನು 225 ರೂಪಾಯಿಗೆ ನಿಗದಿಪಡಿಸಲಾಗಿದ್ದು, ಇದರ ಮೇಲೆ 150 ರೂಪಾಯಿ ಸರ್ವೀಸ್ ಚಾರ್ಜ್ ವಿಧಿಸಲು ಅವಕಾಶವಿದೆ.



Join Whatsapp