ನವಾಬ್ ಮಲಿಕ್ ಪುತ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಇ.ಡಿ

Prasthutha|

- Advertisement -

ಮುಂಬೈ : ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರ ಪುತ್ರರಾದ ಫರಾಜ್ ಮಲಿಕ್ ಮತ್ತು ಅಮೀರ್ ಮಲಿಕ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಜಾರಿ ನಿರ್ದೇಶನಾಲಯ (ಇಡಿ) ನಿರ್ಧರಿಸಿದೆ.

ಫರಾಜ್ ಮತ್ತು ಅಮೀರ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಅನೇಕ ಬಾರಿ ಸಮನ್ಸ್ ಕಳುಹಿಸಲಾಗಿದೆ. ಆದರೆ ಇಬ್ಬರೂ ಸಮನ್ಸ್ ಅನ್ನು ತಪ್ಪಿಸಿಕೊಂಡರು. ಇದಕ್ಕೂ ಮೊದಲು, ಮಾರ್ಚ್ 1 ರಂದು ಜಾರಿ ನಿರ್ದೇಶನಾಲಯವು ಫರಾಜ್ ಗೆ ಮೊದಲ ನೋಟಿಸ್ ನೀಡಿತ್ತು, ಅವರು ಏಜೆನ್ಸಿಯ ಮುಂದೆ ಹಾಜರಾಗದಿದ್ದಾಗ, ಮಾರ್ಚ್ 16 ರಂದು ಮತ್ತೊಂದು ಸಮನ್ಸ್ ಕಳುಹಿಸಲಾಗಿತ್ತು.

- Advertisement -

ಇತ್ತೀಚೆಗೆ, ಮಹಾರಾಷ್ಟ್ರ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ನವಾಬ್ ಮಲಿಕ್ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅಡಿಯಲ್ಲಿ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.ಇ.ಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ಗೋವಾವಾಲಾ ಕಾಂಪೌಂಡ್, ಕುರ್ಲಾ (ಪಶ್ಚಿಮ), ಮುಂಬೈನ ಕುರ್ಲಾ ಪಶ್ಚಿಮದ ವಾಣಿಜ್ಯ ಘಟಕ, ಒಸ್ಮಾನಾಬಾದ್ ಜಿಲ್ಲೆಯಲ್ಲಿ 147.794 ಎಕರೆ ಕೃಷಿ ಭೂಮಿ, ಕುರ್ಲಾ ಪಶ್ಚಿಮದಲ್ಲಿ ಮೂರು ಫ್ಲ್ಯಾಟ್ ಗಳು ಮತ್ತು ಮುಂಬೈನ ಬಾಂದ್ರಾ ಪಶ್ಚಿಮದಲ್ಲಿ ಎರಡು ಫ್ಲ್ಯಾಟ್ ಗಳು ಸೇರಿವೆ.



Join Whatsapp