ಮಂಗಳೂರು: ಟಿಪ್ಪರ್ ಹರಿದ ಪರಿಣಾಮ 6 ವರ್ಷದ ಕಂದಮ್ಮ ಬಲಿಯಾಗಿರುವ ದಾರುಣ ಘಟನೆ ನಗರದ ಹೊರವಲಯದ ಬಜಾಲ್ ನಲ್ಲಿ ನಡೆದಿದೆ.
ಇಲ್ಲಿನ ಕಟ್ಟಪುಣಿ ಬಳಿಯ ಕೋರ್ದಬ್ಬು ದೈವಸ್ಥಾನದ ಸಮೀಪದ ನಿವಾಸಿ ಹಿದಾಯತುಲ್ಲ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಸಾವನ್ನಪ್ಪಿದ ಮಗುವಾಗಿದೆ.
ಜೀಶನ್, ಬುಧವಾರ ಸಾಯಂಕಾಲ 6 ಗಂಟೆ ಸಮಯಕ್ಕೆ ತನ್ನ ಸೈಕಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಟಿಪ್ಪರ್ ಹಾದು ಬಂದಿದ್ದು, ಮಗುವಿನ ಮೇಲೆಯೇ ಹರಿದಿದೆ ಎನ್ನಲಾಗಿದೆ. ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿದ್ದೇ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮರಳು ಸಾಗಿಸುವ ಟಿಪ್ಪರ್ ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.