ನವದೆಹಲಿ । ಅಪರಾಧ ಪ್ರಕ್ರಿಯೆ ಗುರುತಿಸುವಿಕೆ ಕಾಯ್ದೆಗೆ ರಾಷ್ಟ್ರಪತಿ ಸಹಿ

Prasthutha|

ನವದೆಹಲಿ: ಅಪರಾಧ ಸಂದರ್ಭದಲ್ಲಿ ಆರೋಪಿಗಳ ಜೈವಿಕ ಮತ್ತು ದೈಹಿಕ ಮಾದರಿಗಳನ್ನು ಸಂಗ್ರಹಿಸಲು ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡುವ ಅಪರಾಧ ಪ್ರಕ್ರಿಯೆ ಗುರುತಿಸುವಿಕೆ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

- Advertisement -

ಇದರೊಂದಿಗೆ ಕೈದಿಗಳ ಗುರುತಿಸುವಿಕೆ ಕಾಯ್ದೆ 1920 ಕ್ಕೆ ಪರ್ಯಾಯವಾಗಿ ಇದು ಜಾರಿಯಾಗುತ್ತಿದೆ. ಪ್ರಸಕ್ತ ಕಾಯ್ದೆಗೆ ಸಂಸತ್ತಿನ ಉಭಯ ಸದನದಲ್ಲಿ ಈ ತಿಂಗಳ ಆರಂಭದಲ್ಲಿ ಅನುಮೋದನೆ ಆಗಿದ್ದವು.

ಈ ಮಧ್ಯೆ ಲೆಕ್ಕ ಪರಿಶೋಧಕ, ಲೆಕ್ಕಾಧಿಕಾರಿ ಮತ್ತು ಕಂಪೆನಿ ಕಾರ್ಯದರ್ಶಿಗಳ ನಿರ್ವಹಣೆಗೆ ಸಂಬಂಧಿಸಿ ಕಾಯ್ದೆಯ ತಿದ್ದುಪಡಿಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.



Join Whatsapp