ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ

Prasthutha|

- Advertisement -

ಕೊಲಂಬೋ: ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪಿಗೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಕ್ಷಮೆ ಕೇಳಿದ್ದಾರೆ. ಈ ತಪ್ಪನ್ನು ಸರಿ ಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಭೀಕರ ಆರ್ಥಿಕ ಸ್ಥಿತಿಯಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಇದರ ಮಧ್ಯೆಯೇ ಸೋಮವಾರ ಹೊಸ 17 ಸದಸ್ಯರ ಕ್ಯಾಬಿನೆಟ್ ಅನ್ನು ನೇಮಿಸಿದ್ದರು. ಈ ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಚರ್ಚಿಸುವಾಗ ರಾಜಪಕ್ಸೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಕಳೆದ ಎರಡೂವರೆ ವರ್ಷಗಳಲ್ಲಿ ಅತೀ ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕೋವಿಡ್-19 ನೊಂದಿಗೆ ಸಾಲದ ಹೊರೆ ನಮ್ಮನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಲು ಕಾರಣವಾಯಿತು. ನಮ್ಮ ಕಡೆಯಿಂದ ಕೆಲವು ತಪ್ಪುಗಳಾಗಿವೆ. ಅವುಗಳನ್ನು ಸರಿಪಡಿಸಬೇಕಾಗಿದೆ. ಅವುಗಳನ್ನು ಸರಿಪಡಿಸಿ, ಮುನ್ನಡೆದು, ಜನರ ವಿಶ್ವಾಸವನ್ನು ಮರಳಿ ಪಡೆಯಬೇಕು ಎಂದು ರಾಜಪಕ್ಸೆ ತಿಳಿಸಿದರು.

- Advertisement -

ಶ್ರೀಲಂಕಾ ವಿದೇಶಿ ವಿನಿಮಯಕ್ಕೆ ಹಣದ ಕೊರತೆಯನ್ನು ಎದುರಿಸುತ್ತಿದ್ದು, ಸುಮಾರು 25 ಶತಕೋಟಿ ಡಾಲರ್(1.90 ಲಕ್ಷ ಕೋಟಿ ರೂ.)ಗಳಷ್ಟು ಮರುಪಾವತಿಯೂ ಬಾಕಿ ಇದೆ. ಜನರು ತಿಂಗಳುಗಳಿಂದ ಆಹಾರ, ಅಡುಗೆ ಅನಿಲ, ಇಂಧನ, ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆ ಅನುಭವಿಸುತ್ತಿದ್ದಾರೆ.



Join Whatsapp