ವೆರಾವಲ್ ನ ದರ್ಗಾದಲ್ಲಿ ಕೇಸರಿ ಧ್ವಜ: ಐವರ ಬಂಧನ

Prasthutha|

ರಾಜ್ ಕೋಟ್: ಶನಿವಾರ ತಡರಾತ್ರಿ ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಪಟ್ಟಣದಲ್ಲಿ ಪೊಲೀಸ್ ಅನುಮತಿಯಿಲ್ಲದೆ ನಡೆದ “ಹನುಮಾನ್ ಜಯಂತಿ ಮೆರವಣಿಗೆ” ಯ ವೇಳೆ ದರ್ಗಾದಲ್ಲಿ ಕೇಸರಿ ಧ್ವಜವನ್ನು ಹಾರಿಸಲು ಯತ್ನಿಸಿದ ಆರೋಪದ ಮೇಲೆ ಐವರನ್ನು ಮತ್ತು ಬಾಲಾಪರಾಧಿಯೊಬ್ಬನನ್ನು  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ವೆರಾವಲ್ ಪಟ್ಟಣದ ವಖಾರಿಯಾ ಬಜಾರ್ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆ ಸಾಗುತ್ತಿದ್ದಾಗ ಸಂಜೆ 6ರಿಂದ 9 ಗಂಟೆಯ ನಡುವೆ ಈ ಘಟನೆ ನಡೆದಿದ್ದು ಮಗ್ರೆಬಿಷಾ ಬಾಪು ದರ್ಗಾ ತಲುಪುತ್ತಿದ್ದಂತೆ ಮೆರವಣಿಗೆಯಲ್ಲಿದ್ದ ಕೆಲವರು ದರ್ಗಾ ಆವರಣದಲ್ಲಿ ಕೇಸರಿ ಧ್ವಜಾರೋಹಣ ಮಾಡಿದ್ದಾರೆ  ಎಂದು ಗಿರ್ ಸೋಮನಾಥ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಮನೋಹರಸಿನ್ಹ ಜಡೇಜಾ ತಿಳಿಸಿದ್ದಾರೆ.

ಎಸ್ಪಿ ಮತ್ತು ಇತರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. “ಇಲ್ಲಿಯವರೆಗೆ ಎರಡು ಎಫ್ ಐಆರ್ ಗಳನ್ನು ದಾಖಲಿಸಿದ್ದು ಮತ್ತು ಐವರನ್ನು ಹಾಗೂ ಒಬ್ಬ ಬಾಲಾಪರಾಧಿಯನ್ನು ಬಂಧಿಸಲಾಗಿದೆ ಎಂದು ಜಡೇಜಾ ತಿಳಿಸಿದ್ದಾರೆ.



Join Whatsapp