ಉತ್ತರ ಪ್ರದೇಶವನ್ನು ಬುಲ್ಡೋಜರ್ ಬಾಬಾ ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ: ಅಖಿಲೇಶ್ ಯಾದವ್

Prasthutha|

ಲಕ್ನೋ: ಉತ್ತರ ಪ್ರದೇಶವನ್ನು  ಬುಲ್ಡೋಜರ್ ಬಾಬಾ ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಉತ್ತರ ಪ್ರದೇಶ ಅರಾಜಕತೆ ಮತ್ತು ಜಂಗಲ್ ರಾಜ್ ಹಿಡಿತದಲ್ಲಿದೆ. ಕಳೆದ ಐದು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಬುಲ್ಡೋಜರ್ ಸ್ಟೀರಿಂಗ್ ಮೇಲೆ ಕೈಯಿಟ್ಟು, ಮುಖ್ಯಮಂತ್ರಿ ಪ್ರತಿಪಕ್ಷಗಳನ್ನು ಬೆನ್ನಟ್ಟುತ್ತಿದ್ದಾರೆ. ಆದರೆ ಅಧಿಕಾರದಿಂದ ರಕ್ಷಿಸಲ್ಪಟ್ಟ ಕ್ರಿಮಿನಲ್‍ಗಳು ಹೊರಗೆ ವಿಧ್ವಂಸಕರಾಗುತ್ತಿದ್ದಾರೆ. ಬಿಜೆಪಿಯನ್ನರು ಸುಳ್ಳು ಹೇಳುವುದರಲ್ಲಿ ನಿಪುಣರಾಗಿದ್ದು, ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಮತ್ತು ಮೋಸದ ಮೂಲಕ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಸರ್ಕಾರವನ್ನು ರಚಿಸಿದ ಕೂಡಲೇ ಅಯೋಧ್ಯೆಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಯಿತು. ಈ ಘಟನೆಯಿಂದ ಬಾಲಕಿಯ ಚಿಕ್ಕಪ್ಪ ಸಾವನ್ನಪ್ಪಿದ್ದು, ಸಂತ್ರಸ್ತೆಯ ಕುಟುಂಬ ಇನ್ನೂ ನ್ಯಾಯದ ನಿರೀಕ್ಷೆಯಲ್ಲಿದೆ. ಆದರೆ ಅತ್ಯಾಚಾರ ನಡೆದ ಮಠವನ್ನು ಕೆಡವಲು ಯೋಗಿ ಆದಿತ್ಯನಾಥ್ ತಮ್ಮ ಬುಲ್ಡೋಜರ್‌ ಗಳನ್ನು ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.



Join Whatsapp