ಪ್ರಧಾನಿ ಮೋದಿಯನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಹೋಲಿಸಿದ ಸಂಗೀತ ನಿರ್ದೇಶಕ ಇಳಯರಾಜ

Prasthutha|

ನವದೆಹಲಿ: ಪ್ರಧಾನಿ ಮೋದಿಯನ್ನು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಗೆ ಹೋಲಿಸಿದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ನಡೆ ವಿವಾದ ಸೃಷ್ಟಿಸಿದೆ.

- Advertisement -

ಇತ್ತೀಚೆಗೆ ಬಿಡುಗಡೆಯಾದ ‘ಅಂಬೇಡ್ಕರ್ ಹಾಗೂ ಮೋದಿ, ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಎಂಬ ಪುಸ್ತಕವನ್ನು ಇಳಯರಾಜ ಅವರು ರಚಿಸಿದ್ದು, ಪ್ರಧಾನಿ ಮೋದಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಲಾಗಿದೆ ಎಂದು ದೂರಲಾಗಿದೆ.

ಸದ್ಯ ಇಳಯರಾಜ ಅವರ ಈ ಬರಹಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಲವು ವಿಷಯಗಳಲ್ಲಿ ವಿಭಿನ್ನತೆ ಹೊಂದಿದ, ಸಮಾನತೆಯ ರುವಾರಿ ಬಿ.ಆರ್. ಅಂಬೇಡ್ಕರ್ ಅವರನ್ನ್ ಪ್ರಧಾನಿ ಮೋದಿ ಅವರಿಗೆ ಹೋಲಿಸಿರುವುದು ಸಮಂಜಸವಲ್ಲ ಎಂಬ ಆಕ್ರೋಶ ವ್ಯಕ್ತವಾಗಿವೆ.

- Advertisement -

ತ್ರಿವಳಿ ತಲಾಖ್, ಬೇಟಿ ಬಚಾವೋ ಬೇಟಿ ಪಢಾವೋ ಸೇರಿದಂತೆ ಮಹಿಳೆಯರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸದ ಬಗ್ಗೆ ಅಂಬೇಡ್ಕರ್ ಅಭಿಮಾನ ವ್ಯಕ್ತಪಡಿಸುತ್ತಿದ್ದರು ಎಂದು ಮುನ್ನುಡಿ ತಿಳಿಸುತ್ತದೆ. ಮಹಿಳೆಯರ ವಿವಾಹದ ವಯಸ್ಸು 18 ರಿಂದ 21 ಕ್ಕೆ ಏರಿಸುವ ಕಾಯ್ದೆಯ ಬಗ್ಗೆ ಪ್ರಶಂಸಿಲಾಗಿದೆ.

ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಆದರ್ಶ, ದೂರದೃಷ್ಟಿಯ ಜೊತೆ ಮೋದಿಯ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯನ್ನು ಜೋಡಿಸುವ ಪ್ರಯತ್ನವನ್ನು ಪುಸ್ತಕದಲ್ಲಿ ನಿರ್ವಹಿಸಿರುವುದಾಗಿ ಇಳಯರಾಜ್ ತಿಳಿಸಿದ್ದಾರೆ.

ಪುಸ್ತಕದ ಉಲ್ಲೇಖದ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ರಾಜ್ಯಸಭಾ ಸಂಸದ ಟಿಕೆಎಸ್ ಇಳಂಗೋವನ್, ಪ್ರಧಾನಿ ಮೋದಿ ಮತ್ತು ಅಂಬೇಡ್ಕರ್ ಅವರನ್ನು ಹೋಲಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಅವರು ವರ್ಣ ವ್ಯವಸ್ಥೆಯಿಂದ ತುಳಿತಕ್ಕೊಳಗಾದವರ ಪರ ಕೆಲಸ ಮಾಡಿದರೆ, ಪ್ರಧಾನಿ ಮೋದಿಯವರು ಅಂಬೇಡ್ಕರ್ ವಿರುದ್ಧ ಹೋರಾಡುತ್ತಿದ್ದ ಮನುಧರ್ಮ ಜಾರಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಇಳಂಗೋವನ್ ಟೀಕಿಸಿದ್ದಾರೆ.



Join Whatsapp