ಕಾರವಾರ: ನಿಗದಿಗಿಂತ ಹೆಚ್ಚಿನ ಜನರನ್ನು ರಿವರ್ ರ್ಯಾಫ್ಟಿಂಗ್ ಗೆ ಕರೆದುಕೊಂಡು ಹೋದ ಪರಿಣಾಮ ಬೋಟ್ ಅಪಾಯಕ್ಕೆ ಸಿಲುಕಿರುವ ಘಟನೆ ತಾಲೂಕಿನ ಗಣೇಶಗುಡಿ ಸಮೀಪ ಕಾಳಿ ನದಿಯಲ್ಲಿ ನಡೆದಿದೆ. ಈ ವೇಳೆ, ಅಪಾಯಕ್ಕೆ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ.
ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಮುಳುಗುತ್ತಿದ್ದ ಬೋಟ್ ನ್ನು ಸಮೀಪದಲ್ಲೇ ಇನ್ನೊಂದು ಬೋಟ್ ನಲ್ಲಿದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಪ್ರವಾಸಿಗರನ್ನು ರಕ್ಷಿಸುತ್ತಿರುವ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಸಣ್ಣ ರ್ಯಾಫ್ಟಿಂಗ್ ಬೋಟ್ನಲ್ಲಿ ಗರಿಷ್ಠ 6 ಜನರನ್ನು ಕರೆದೊಯ್ಯಬಹುದಾಗಿದೆ. ಆದರೆ 12 ಜನರನ್ನು ಬೋಟ್ನಲ್ಲಿ ಕರೆದೊಯ್ಯಲಾಗಿತ್ತು. ಇದೇ ಅವಘಡಕ್ಕೆ ಕಾರಣ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.