ಮೈಸೂರು: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ವರದಿಯಾಗಿದೆ.ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಕ್ರೌರ್ಯ ನಡೆದಿದೆ.ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ.
ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಓರ್ವ ಆರೋಪಿ ತಗಡೂರು ಗ್ರಾಮದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಪುಟ್ಟಣ್ಣ ಹಾಗೂ ರವಿ.ಆ.ಪೋಕ್ಲೇನ್ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಏಪ್ರಿಲ್ 11 ರಂದು ಘಟನೆ ನಡೆದಿದ್ದು ಗೌರವಕ್ಕೆ ಹೆದರಿ ಸಂತ್ರಸ್ಥ ಮಹಿಳೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದ್ದು,ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಪ್ರಿಲ್ 11 ರಂದು 35 ವರ್ಷದ ಸಂತ್ರಸ್ಥ ಮಹಿಳೆ ಆರೋಪಿ ರಾಜು ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದರು. ಈ ವೇಳೆ ಪ್ರತ್ಯಕ್ಷನಾದ ರಾಜು ಸಂತ್ರಸ್ಥೆಯನ್ನ ದೈಹಿಕ ಸಂಪರ್ಕಕ್ಕಾಗಿ ಪುಸಲಾಯಿಸಿದ್ದಾನೆ.ನಿರಾಕರಿಸಿದ ಮಹಿಳೆಯನ್ನ ಬಲವಂತವಾಗಿ ಎಳೆದಾಡಿದ್ದಾನೆ.ರಾಜು ಪ್ರಯತ್ನಕ್ಕೆ ಮಹಿಳೆ ಪ್ರತಿರೋಧಿಸಿದ್ದಾಳೆ.ಈ ವೇಳೆ ಪುಟ್ಟಣ್ಣ ಹಾಗೂ ರವಿಯನ್ನ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಮೂವರೂ ಸೇರಿ ಮಹಿಳೆಯನ್ನ ಬಲವಂತವಾಗಿ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.
ತೀವ್ರ ಅಸ್ವಸ್ಥಗೊಂಡ ಮಹಿಳೆ ಸ್ಥಳದಲ್ಲೇ ಬಿದ್ದಿದ್ದಾರೆ. ಕುರಿಗಳು ಮಾತ್ರ ಮನೆ ಸೇರಿಕೊಂಡಿದ್ದು, ಪತ್ನಿ ಹಿಂದಿರುಗದ ಹಿನ್ನಲೆ ಪತಿ ಕುರಿ ಮೇಯಿಸುತ್ತಿದ್ದ ಸ್ಥಳಕ್ಕೆ ತೆರಳಿದಾಗ ಅಸ್ವಸ್ಥಳಾಗಿ ಕಂಡು ಬಿದ್ದಿರುವುದನ್ನು ಕಂಡು ಕೂಡಲೇ ಸಂತ್ರಸ್ಥೆಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಅತ್ಯಾಚಾರ ನಡೆದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಮಹಿಳೆ ಎರಡು ದಿನಗಳ ನಂತರ ವಿಚಾರ ಹೇಳಿದ್ದಾರೆ.