ಇಂಗ್ಲೆಂಡ್: ಟೆಸ್ಟ್ ಸರಣಿಯಲ್ಲಿ ಸತತ ಸೋಲನುಭವಿಸಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಜೋ ರೂಟ್ ಶುಕ್ರವಾರ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನಾಯಕ ಸ್ಥಾನವನ್ನು ತೊರೆದಿದ್ದಾರೆ. ಐದು ವರ್ಷಗಳ ಕಾಲ ನಾಯಕತ್ವ ವಹಿಸಿಕೊಂಡಿದ್ದ ರೂಟ್, ದೀರ್ಘ ಸರಣಿ ಸೋಲುಗಳಿಂದಾಗಿ ಟೆಸ್ಟ್ ನಾಯಕತ್ವ ಸ್ಥಾನದಿಂದಾಗಿ ಕೆಳಗಿಳಿದಿದ್ದಾರೆ.
ನಾನು ನನ್ನ ದೇಶವನ್ನು ಮುನ್ನಡೆಸುವುದನ್ನು ಇಷ್ಟಪಟ್ಟಿದ್ದೇನೆ, ಆದರೆ ಇತ್ತೀಚೆಗೆ ಕೆಲವೊಂದು ಬೆಳವಣಿಗೆಯಿಂದಾಗಿ ನನ್ನನ್ನು ಆಟದಿಂದ ದೂರ ಸರಿದಿದೆ” ಎಂದು ರೂಟ್ ಹೇಳಿದ್ದಾರೆ. ರೂಟ್ ನಾಯಕತ್ವದ ಬಗ್ಗೆ ಅಪಸ್ವರ ಹೆಚ್ಚಾಗಿತ್ತು. ಮೈಕಲ್ ವಾನ್ ನಾಸಿರ್ ಹುಸೈನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೂಡಾ ರೂಟ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದರು.
64 ಪಂದ್ಯಗಳಿಗೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ರೂಟ್, 27ರಲ್ಲಿ ಗೆಲುವು, 26ರಲ್ಲಿ ಸೋಲನ್ನು ಕಂಡಿದ್ದಾರೆ.