ನವದೆಹಲಿ । UAPA ವಿಚಾರಣಾಧೀನ ಕೈದಿಗೆ 8 ವರ್ಷಗಳ ಬಳಿಕ ಜಾಮೀನು

Prasthutha|

ನವದೆಹಲಿ: UAPA ಕಾಯ್ದೆ ಅಡಿಯಲ್ಲಿ ಬಂಧಿತರಾಗಿ ವಿಚಾರಣಾಧೀನ ಕೈದಿಯಾಗಿದ್ದ ಝಹೀರ್ ಹಕ್ ಎಂಬವರಿಗೆ ಸುಮಾರು 8 ವರ್ಷಗಳ ಬಳಿಕ ಸುಪ್ರೀಮ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ಆರೋಪಿ ಝಹೀರ್ ಹಕ್ ವಿರುದ್ಧ ಐಪಿಸಿ ಸೆಕ್ಷನ್ 10, 13, 15, 16, 17, 18, 18 ಎ, 18 ಬಿ, 19, 20, 23 ಮತ್ತು 38 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದಿನಾಂಕ 08.05.2014 ರಂದು ಬಂಧಿಸಲಾಗಿತ್ತು.

ಭಯೋತ್ಪಾದಕನೊಂದಿಗೆ ನಂಟು ಹೊಂದಿದ್ದಾನೆ ಎಂದು ಆರೋಪಿಸಿ ರಾಜಸ್ಥಾನ ಪೊಲೀಸರು ಝಹೀರ್ ಹಕ್ ಎಂಬವರನ್ನು UAPA ಕಾಯ್ದೆ ಅಡಿಯಲ್ಲಿ ಬಂಧಿಸಿದ್ದರು.

- Advertisement -

ಈ ಮಧ್ಯೆ ಆರೋಪಿ ಹಕ್ ಎಂಬವರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ಆರೋಪಿ ವಿರುದ್ಧ ಇದುವರೆಗೂ 109 ಸಾಕ್ಷಿಗಳ ಪೈಕಿ ಕೇವಲ 6 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಿರುವ ಕುರಿತು ನ್ಯಾಯಾಲಯ ಗಮನ ಸೆಳೆದಿದೆ. ಆರೋಪಿ ಹಕ್ ಸ್ಲೀಪರ್ ಸೆಲ್ ನ ಮುಖ್ಯಸ್ಥನೊಂದಿಗೆ ಸಂಪರ್ಕದಲ್ಲಿದ್ದ ಎಂದು ಆರೋಪಿಸಿ ಜೈಲಿಗಟ್ಟಿರುವುದು ಸುಪ್ರೀಮ್ ಕೋರ್ಟ್ ಪೀಠ ಗಮನಿಸಿದೆ.

ಮಾತ್ರವಲ್ಲ ಹೆಚ್ಚು ವಿವಾದವಿಲ್ಲದೆ ವಿಚಾರಣಾಧೀನ ಕೈದಿಯಾಗಿರುವ ಹಕ್ ಈಗಾಗಲೇ ದೀರ್ಘಕಾಲದ ಸೆರೆವಾಸವನ್ನು ಅನುಭವಿಸಿದ್ದಾನೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ವಿಚಾರಣೆಯಲ್ಲಿ ವಿಳಂಬವಾದ ಕಾರಣ ಆರೋಪಿಗೆ ಜಾಮೀನು ನೀಡುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ.



Join Whatsapp