ಕೋಮು ಹಿಂಸಾಚಾರಕ್ಕೆ ಮುಸ್ಲಿಮರೇ ಸುಲಭ ಗುರಿ; ಅಮೆರಿಕ ವಿದೇಶಾಂಗ ಇಲಾಖೆ

Prasthutha|

ವಾಷಿಂಗ್ಟನ್: ಭಾರತದಲ್ಲಿ ಮುಸ್ಲಿಮರು ಸುಲಭವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಕೋಮು ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯು ವರದಿ ಮಾಡಿದೆ.

- Advertisement -

2021 ರಲ್ಲಿ ವಿವಿಧ ದೇಶಗಳಲ್ಲಿ ಮಾನವ ಹಕ್ಕುಗಳ ಪಾಲನೆ ಬಗ್ಗೆ ಬಿಡುಗಡೆಗೊಂಡ ವರದಿಯಲ್ಲಿ ಅಮೆರಿಕ ಸರಕಾರ ಭಾರತದ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಹೋರಾಟಗಾರರ ಬಂಧನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಕಾಶ್ಮೀರಿ ಪತ್ರಕರ್ತರ ವಿರುದ್ಧದ ಪ್ರಕರಣಗಳು ಮತ್ತು ಕಾನೂನುಬಾಹಿರ  ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧನಗಳನ್ನು ಎತ್ತಿ ತೋರಿಸಿ  ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ನಡೆಯುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

- Advertisement -

ಪೊಲೀಸರು , ಅಧಿಕಾರಿಗಳು ಅಲ್ಪಸಂಖ್ಯಾತರನ್ನು ಅಮಾನುಷವಾಗಿ ಬಂಧಿಸುವ ಮತ್ತು ನಡೆಸಿಕೊಳ್ಳುವ ರೀತಿ ಹಾಗೂ ಕಾನೂನುಬಾಹಿರ ಶಿಕ್ಷೆ ಮುಂತಾದ ಕಳವಳಕಾರಿ ವಿಷಯಗಳನ್ನು ವರದಿ ಪ್ರಸ್ತಾಪಿಸಿದೆ. ಮುಸ್ಲಿಮರೊಂದಿಗೆ ಬಹುಸಂಖ್ಯಾತರು ಬಲವಂತವಾಗಿ ಜೈ ಶ್ರೀರಾಂ  ಘೋಷಣೆ ಕೂಗುವಂತೆ ಬಲವಂತಗೊಳಿಸುವುದರ ಬಗ್ಗೆ ಉಲ್ಲೇಖಿಸಿದ ವರದಿಯು  ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುಸ್ಲಿಮರನ್ನು ನಡೆಸಿಕೊಂಡ ರೀತಿಯನ್ನು ಬೊಟ್ಟು ಮಾಡಿದೆ. ಅದೇ ರೀತಿ ಅಸ್ಸಾಮಿನ ದರಾಂಗ್ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ತೆರವುಗೊಳಿಸುವಾಗ ನಡೆದ ಪೊಲೀಸ್ ಗೋಲಿಬಾರ್ ಬಗ್ಗೆಯೂ ವಿದೇಶಾಂಗ ಇಲಾಖೆ ವರದಿ ಮಾಡಿದೆ.



Join Whatsapp