ನವದೆಹಲಿ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿರುವ ದ್ವೇಷ ಭಾಷಣ ಪ್ರಕರಣ ಕುರಿತ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಿದೆ.
ಹಿಮಾಚಲ ಪ್ರದೇಶದಲ್ಲಿ ಉದ್ದೇಶಿತ ಧರ್ಮ ಸಂಸದ್ ಕಾರ್ಯಕ್ರಮದ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಲು ಅರ್ಜಿದಾರ-ಪತ್ರಕರ್ತ ಖುರ್ಬಾನ್ ಅಲಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮಾತ್ರವಲ್ಲ ಮುಂದೆ ನಡೆಯಲಿರುವ ಧರ್ಮಸಂಸತ್ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಅವಕಾಶ ಕಲ್ಪಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಅಭಯ್ ಎಸ್.ಒಕಾ ಅವರನ್ನು ಒಳಗೊಂಡ ಪೀಠ, ಪರ್ತಕರ್ತ ಖುರ್ಬಾನ್ ಅಲಿ ಮತ್ತು ಹಿರಿಯ ವಕೀಲ ಅಂಜನಾ ಪ್ರಕಾಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿತು.
ಅಫಿದವಿತ್ ಸಲ್ಲಿಸಲು ಉತ್ತರಾಖಂಡ ಸರ್ಕಾರ ಕಾಲಾವಕಾಶ ಕೋರಿದೆ. ಮಾತ್ರವಲ್ಲ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಎಫ್ ಐಆರ್ ದಾಖಲಾಗಿದೆ. 3 ಪ್ರಕರಣದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.
ಶಿಮ್ಲಾದಲ್ಲಿ ನಡೆಸಲು ಉದ್ದೇಶಿಸಿರುವ ಧರ್ಮ ಸಂಸತ್ ವಿರುದ್ಧ ಅರ್ಜಿ ಸಲ್ಲಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಪೀಠದ ಎದುರು ಹಾಜರಾಗಿ,
2021 ಡಿಸೆಂಬರ್ ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಲಾಗಿತ್ತು.
ನಿಜವಾದ ಸಮಸ್ಯೆಯೆಂದರೆ ಈ ಕಾರ್ಯಕ್ರಮ ಭಾನುವಾರ ನಿಗದಿಯಾಗಿದೆ. ಮತ್ತು ಏನಾಗುತ್ತಿದೆ ಎಂದು ನೋಡಿ. ಸಾರ್ವಜನಿಕವಾಗಿ ಹೇಳಿದ ವಿಷಯಗಳನ್ನು ಇಲ್ಲಿ ನಾನು ಓದಲು ಸಹ ಬಯಸುವುದಿಲ್ಲ…… ಎಂದು ಕಪಿಲ್ ಸಿಬಲ್ ಹೇಳಿದರು.
ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಿತು.