ಮಂಜೇಶ್ವರ: ಸಂಘಪರಿವಾದ ಬಹಿಷ್ಕಾರದ ಮಧ್ಯೆ ದೈವಗಳಿಂದಲೇ ಮುಸಲ್ಮಾನರ ವ್ಯಾಪಾರಕ್ಕೆ ಚಾಲನೆ

Prasthutha|

ಮಂಜೇಶ್ವರ: ಇಲ್ಲಿನ ಉದ್ಯಾವರದ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಮುಸ್ಲಿಂ ವ್ಯಕ್ತಿಯಿಂದಲೇ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನ ಕಾಯಿ ಹಾಗು ವೀಳ್ಯದೆಲೆ ಖರೀದಿಸಿದ ಘಟನೆ ನಡೆದಿದೆ.

- Advertisement -


ಕ್ಷೇತ್ರದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿರುವ ಬೆಳವಣಿಗೆಗಳ ಮಧ್ಯೆ ಈ ಘಟನೆಯೂ ಗಮನ ಸೆಳೆದಿದೆ. ಖುದ್ದು ದೈವ ವೇಷಧಾರಿಗಳೇ ಮುಸ್ಲಿಮರ ಅಂಗಡಿ ಸ್ಥಾಪಿಸಿ, ವ್ಯಾಪಾರ ಮಾಡಿ ಉತ್ಸವಕ್ಕೆ ದಿನನಿಶ್ಚಯ ಮಾಡುವ ಮೂಲಕ ಮುಸ್ಲಿಮರ ವ್ಯಾಪಾರಕ್ಕೆ ನಮ್ಮದೇನು ಅಡ್ಡಿಯಿಲ್ಲವೆಂಬುದಾಗಿ ಸಾರಿದೆ.


ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಉದ್ಯಾವರ ಸಾವಿರ ಜಮಾಅತ್ ಗೊಳಪಟ್ಟ ಮುಸಲ್ಮಾನರು ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡು ಬಳಿಕ ದಿನ ಕಟ್ಟೆಯ ಮುಂಭಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು.

- Advertisement -


ಈ ಕಾರ್ಯಕ್ರಮದಲ್ಲಿ ಉದ್ಯಾವರ ಜಮಾಅತಿಗೊಳಪಟ್ಟ ಅನುವಂಶೀಯ ಕುಟುಂಬ ಇಲ್ಲಿ ವೀಳ್ಯದೆಲೆ ಹಾಗೂ ತೆಂಗಿನ ಕಾಯಿ ಮಾರಾಟ ನಡೆಸಬೇಕಾಗಿದೆ. ಇದರಂತೆ ಸೈಯದ್ ಎಂಬವರು ನಡೆಸುತ್ತಿರುವ ವ್ಯಾಪಾರಕ್ಕೆ ಕ್ಷೇತ್ರದ ಅಣ್ಣ ತಮ್ಮ ದೈವಗಳು ಆಗಮಿಸಿ ಸಾಮಗ್ರಿ ಖರೀದಿಸಿ ಆಶೀರ್ವಾದವನ್ನು ನೀಡಿದೆ.



Join Whatsapp