ಮಕ್ಕಾ| ಯಾತ್ರಾರ್ಥಿಗಳೊಂದಿಗೆ ಸಂವಹನ ನಡೆಸಲು ಬಹುಭಾಷಾ ರೋಬೋಟ್ ಗಳು ಸಜ್ಜು

Prasthutha|

ರಿಯಾದ್: ಮಕ್ಕಾದ ಮಸ್ಜಿದುಲ್  ಹರಾಮ್ ನಲ್ಲಿ ಯಾತ್ರಾರ್ಥಿಗಳೊಂದಿಗೆ ಸಂವಹನ ನಡೆಸಲು ಬಹುಭಾಷಾ ರೋಬೋಟ್ ಗಳನ್ನು ಸಜ್ಜುಗೊಳಿಸಲಾಗುವುದು ಎಂದು ಹರಂ ಮೂಲಗಳು ತಿಳಿಸಿವೆ.

- Advertisement -

ಎಐ-ವರ್ಗದ ರೋಬೋಟ್ ಗಳು ಇನ್ನು ಮುಂದೆ ಸೇವೆಗೆ ಸಿದ್ಧವಾಗಿರುತ್ತದೆ. 11 ಭಾಷೆಗಳಲ್ಲಿ, ಯಾತ್ರಾರ್ಥಿಗಳಿಗೆ ಹರಮ್ ನ ವಿದ್ವಾಂಸರೊಂದಿಗೆ ತಮ್ಮ ಸಂದೇಹಗಳನ್ನು ಪರಿಹರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಸ್ತುತ, ರೋಬೋಟ್ ಗಳು ಹರಮ್ ನಲ್ಲಿ ಝಂಝಂ  ವಿತರಣೆ ಮತ್ತು ಹರಮ್ ಶುದ್ದೀಕರಣದಲ್ಲಿ ನೆರವಾಗುತ್ತಿವೆ. ಹೊಸ ರೋಬೋಟಿಕ್ ವ್ಯವಸ್ಥೆಯು ನೂಕುನುಗ್ಗಲು ತಡೆಯಲು ಯಾತ್ರಾರ್ಥಿಗಳಿಗೆ ಸಹಾಯಕವಾಗಲಿದೆ ಎಂದು ಮೂಲಗಳು ತಿಳಿಸಿವೆ.



Join Whatsapp