ದೇವಸ್ಥಾನದ ಬಳಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರ ಅಂಗಡಿ ಧ್ವಂಸಗೈದ ಶ್ರೀರಾಮ ಸೇನೆ

Prasthutha|

ಬೆಂಗಳೂರು: ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರ ಅಂಗಡಿಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಧ್ವಂಸ ಮಾಡಿದ ಘಟನೆ ಧಾರವಾಡ ಜಿಲ್ಲೆಯ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿ ನಡೆದಿದೆ.

- Advertisement -

ಹಲವು ವರ್ಷಗಳಿಂದ ದೇವಸ್ಥಾನದ ಆವರಣದಲ್ಲಿ ಹೂವು, ಹಣ್ಣು ಕಾಯಿ ಹಾಗೂ ಕಲ್ಲಂಗಡಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಮುಸ್ಲಿಮರಿಗೆ ಸೇರಿದ್ದ ನಾಲ್ಕು ಅಂಗಡಿಗಳಿಗೆ ನುಗ್ಗಿದ  ಶ್ರೀರಾಮ ಸೇನೆ ಕಾರ್ಯಕರ್ತರು, ಅಲ್ಲಿದ್ದ ವಸ್ತುಗಳನ್ನು ರಸ್ತೆಗೆ ಚೆಲ್ಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

ಎರಡು ವಾರಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ದೇವಸ್ಥಾನದ ಟ್ರಸ್ಟ್ಗೆ ಮನವಿ ನೀಡಲಾಗಿತ್ತು. ಆದರೆ ದೇವಸ್ಥಾನ ಸಮಿತಿ ಅದಕ್ಕೆ ಮಣೆ ಹಾಕದ್ದರಿಂದ ಆಕ್ರೋಶಗೊಂಡು ಶ್ರೀರಾಮ ಸೇನೆಯವರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp