ತುರ್ತು ಲ್ಯಾಂಡಿಂಗ್ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ

Prasthutha|

ಸ್ಯಾನ್ ಜೋಸ್ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಸರಕು ವಿಮಾನವೊಂದು ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೀಗಾಗಿ, ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.

- Advertisement -

ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ ಎಲ್‌ ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು, ವಿಮಾನ ರನ್‌ ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ‘ಸುರಕ್ಷಿತವಾಗಿದ್ದಾರೆ’ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ.



Join Whatsapp