ಹಿಜಾಬ್, ಕುಂಕುಮ ಹಾಕಿದ್ದ ಬಾಲಕಿಯರಿಗೆ ಹಲ್ಲೆ | ಶಿಕ್ಷಕ ಅಮಾನತು, ಪೊಲೀಸ್ ವಶಕ್ಕೆ

Prasthutha|

ಕಾಶ್ಮೀರ ಕರ್ನಾಟಕ, ಯುಪಿ, ಬಿಹಾರದಂತೆ ಆಗಲು ಬಿಡಲಾರೆವು

- Advertisement -

ಶ್ರೀನಗರ: ಹಿಜಾಬ್ ತೊಟ್ಟಿದ್ದ ಹಾಗೂ ಕುಂಕುಮ ಹಾಕಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕನೋರ್ವ ಹಲ್ಲೆ ನಡೆಸಿದ ಘಟನೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಇಬ್ಬರೂ ವಿದ್ಯಾರ್ಥಿನಿಯರು ಇಲ್ಲಿನ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಹಲ್ಲೆ ನಡೆಸಿದ ಶಿಕ್ಷಕ ನಿಸಾರ್ ಅಹ್ಮದ್ ನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ರಜೌರಿ ಜಿಲ್ಲಾಡಳಿತವು ಶಿಕ್ಷಕನನ್ನು ಅಮಾನತುಗೊಳಿಸಿದ್ದು ವಿಚಾರಣೆ ಆರಂಭಿಸಿದೆ.

- Advertisement -

ಶಿಕ್ಷಕ ನಿಸಾರ್ ಅಹ್ಮದ್ ಹಿಜಾಬ್ ಧರಿಸಿದ್ದ ಮುಸ್ಲಿಂ ಹಾಗೂ ಕುಂಕುಮ ಹಾಕಿಕೊಂಡಿದ್ದ ಹಿಂದೂ ಬಾಲಕಿ ಮೇಲೆ ನಡೆಸಿದ್ದಾಗಿ ಇಬ್ಬರೂ ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರ ಪೋಷಕರು ಜೊತೆಯಾಗಿ ಕೂತು ವೀಡಿಯೋ ಸಂದೇಶ ರವಾನಿಸಿದ್ದು ಭಾರೀ ಗಮನಸೆಳೆದಿದೆ.

ನನ್ನ ಹಾಗೂ ಶಾಕೂರ್ ಅವರ ಮಗಳಿಗೆ ಕುಂಕುಮ ಹಾಗೂ ಹಿಜಾಬ್ ಧರಿಸಿದ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ. ನಾಳೆ ಇನ್ನೋರ್ವ ಶಿಕ್ಷಕರು ಇದೇ ಕಾರಣಕ್ಕಾಗಿ ಹಲ್ಲೆ ನಡೆಸಬಹುದು. ಹಾಗಾಗಿ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆ ಕೂಡಲೇ ತನಿಖೆ ನಡೆಸುವಂತೆ ಹಿಂದೂ ಬಾಲಕಿಯ ತಂದೆ ಅಂಗ್ರೇಝ್ ಸಿಂಗ್ ಒತ್ತಾಯಿಸಿದ್ದಾರೆ.

ಇದೇ ವೇಳೆ ಕರ್ನಾಟಕ ಸಹಿತ ಇನ್ನಿತರ ರಾಜ್ಯಗಳಲ್ಲಿ ತಲೆದೋರಿದ್ದ ಹಿಜಾಬ್ ಸಮಸ್ಯೆ ಕುರಿತಾಗಿಯೂ ಮಾತನಾಡಿರುವ ಅವರು, “ಜಮ್ಮು ಕಾಶ್ಮೀರದಲ್ಲಿ ಇಂತಹ ವಿವಾದಗಳಿಗೆ ಅವಕಾಶ ನೀಡಬಾರದು. ಇಂತಹ ಘಟನೆಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ. ಕಾಶ್ಮೀರವನ್ನು ಕರ್ನಾಟಕ, ಉತ್ತರ ಪ್ರದೇಶ, ಬಿಹಾರದಂತೆ ಆಗಲು ಬಿಡಲಾರೆವು” ಎಂದಿದ್ದಾರೆ.

ಮುಸ್ಲಿಂ ಬಾಲಕಿಯ ತಂದೆ ಮೊಹಮ್ಮದ್ ಶಾಕೂರ್ ಮಾತನಾಡಿ, “ನನ್ನ ಮಗಳ ಮೇಲೆ ಶಿಕ್ಷಕರು ಪಂಚ್ ಹಾಗೂ ಒದೆಯುವ ಮೂಲಕ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.



Join Whatsapp