ಸ್ವದೇಶೀ ನಿರ್ಮಿತ 100 ರಕ್ಷಣಾ ಸಲಕರಣೆಗಳ ಮೂರನೇ ಪಟ್ಟಿ ಇಂದು ಬಿಡುಗಡೆ

Prasthutha|

ಹೊಸದಿಲ್ಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಹೊಸ ಹೆಜ್ಜೆಯಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸ್ವದೇಶಿ ನಿರ್ಮಿತ ರಕ್ಷಣಾ ಸಲಕರಣೆಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. 2020 ರಲ್ಲಿ, 101 ವಸ್ತುಗಳ ಮೊದಲ ಪಟ್ಟಿ ಮತ್ತು 2021 ರಲ್ಲಿ, 108 ಉಪಕರಣಗಳು ಮತ್ತು ಇತರ ವಸ್ತುಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈಗ ಬಿಡುಗಡೆಯಾಗುತ್ತಿರುವ ಮೂರನೇ ಪಟ್ಟಿಯಲ್ಲಿ 100 ವಸ್ತುಗಳು ಸೇರಿವೆ.

- Advertisement -

2025ರ ವೇಳೆಗೆ ಈ ಪಟ್ಟಿಯಲ್ಲಿರುವ ರಕ್ಷಣಾ ಸಲಕರಣೆಗಳನ್ನು ದೇಶೀಯವಾಗಿ ತಯಾರಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ. ಇದರ ನಂತರ, ಈ ವಸ್ತುಗಳ ಆಮದನ್ನು ನಿಷೇಧಿಸಲಾಗುವುದು. ಈ ಪಟ್ಟಿಯಲ್ಲಿ ಬಂದೂಕುಗಳು, ವಿಮಾನಗಳು ಮತ್ತು ಫೈಟರ್ ಜೆಟ್ ಗಳು ಸೇರಿವೆ.

ಮೂರನೇ ಪಟ್ಟಿಯಲ್ಲಿ ಸೇರಿಸಲಾದ 100 ರಕ್ಷಣಾ ಉಪಕರಣಗಳ ತಯಾರಿಕೆಯ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಕಂಪನಿಗಳಿಗೆ 2.10 ಲಕ್ಷ ಕೋಟಿ ರೂ.ಗಳ ಆರ್ಡರ್ ಗಳು  ಲಭಿಸಲಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

- Advertisement -

ಮೊದಲ ಮತ್ತು ಎರಡನೇ ಶೆಡ್ಯೂಲ್ ಬಿಡುಗಡೆಯಾದಾಗಿನಿಂದ, ರಕ್ಷಣಾ ಸಚಿವಾಲಯವು 53,839 ಕೋಟಿ ರೂ.ಗಳ 31 ಯೋಜನೆಗಳಿಗೆ ಅನುಮೋದನೆ ನೀಡಿದೆ. 1,77,258 ಕೋಟಿ ರೂ.ಗಳ 83 ಯೋಜನೆಗಳ ಕಾಮಗಾರಿಯೂ ಪ್ರಗತಿಯಲ್ಲಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ 2,93,741 ಕೋಟಿ ರೂ.ಗಳ ಇತರ ರಕ್ಷಣಾ ಉತ್ಪನ್ನಗಳ ಸ್ವದೇಶಿಕರಣವನ್ನು ಸಹ ಖಚಿತಪಡಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.



Join Whatsapp