ಅನಿರ್ಧಿಷ್ಟಾಧಿಗೆ ಮುಂದೂಡಿದ ಬಜೆಟ್ ಅಧಿವೇಶನ: 17 ದಿನಗಳಲ್ಲಿ 13 ಮಸೂದೆಗಳು ಅಂಗೀಕಾರ

Prasthutha|

ನವದೆಹಲಿ: ಬಜೆಟ್ ಅಧಿವೇಶನದ ಉಭಯ ಸದನಗಳನ್ನು ಅನಿಧಿಷ್ಟಾವಧಿಗೆ ಮುಂದೂಡಲಾಗಿದ್ದು, 17 ದಿನಗಳಲ್ಲಿ 13 ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಓಂ ಬಿರ್ಲಾ, ಲೋಕಸಭೆಯ ಕಲಾಪದಲ್ಲಿ 12 ಮಸೂದೆಗಳನ್ನು ತಿದ್ದುಪಡಿಯೊಂದಿಗೆ ಮರು ಅಂಗೀಕಾರ ಮತ್ತು 13 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪೈಕಿ ಪ್ರಮುಖ ವಿಧೇಯಕವಾದ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಆರೋಪಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ನೇರವಾಗಿ ಪಡೆಯಲು ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಹಲವಾರು ವಿರೋಧ ಪಕ್ಷಗಳು ಈ ಮಸೂದೆಯನ್ನು ಅಸಂವಿಧಾನಿಕ ಮತ್ತು ಕರಾಳ ಎಂದು ಟೀಕಿಸಿದ್ದವು ಮತ್ತು ದುರುಪಯೋಗ ಪಡಿಸುವ ಸಾಧ್ಯತೆಯಿದೆ ಎಂದು ಪ್ರತಿಪಾದಿಸಿದೆ.

- Advertisement -

ಈ ಮಧ್ಯೆ ಮತ್ತೊಂದು ಪ್ರಮುಖ ಮಸೂದೆ ಮುನ್ಸಿಪಲ್ ಕಾರ್ಪೋರೇಷನ್ (ತಿದ್ದುಪಡಿ) ಮಸೂದೆಯನ್ನು ಸಾಕಷ್ಟು ವಿರೋಧದ ಅಂಗೀಕರಿಸಲಾಯಿತು. ಇತರ ಮಸೂದೆಗಳೆಂದರೆ ಹಣಕಾಸು ಮಸೂದೆ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳು (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ.

ರಾಜ್ಯಸಭೆಯು ಆರು ವಿನಿಯೋಗ ಮಸೂದೆಗಳು ಮತ್ತು ಹಣಕಾಸು ಮಸೂದೆಗಳು ಸೇರಿದಂತೆ 11 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ.

ಜನವರಿ 31 ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಆರಂಭವಾದ ಬಜೆಟ್ ಅಧಿವೇಶನವು, ಅಧಿವೇಶನದ ಮೊದಲ ಭಾಗವು ಫೆಬ್ರವರಿ 11 ರಂದು ಮುಕ್ತಾಯಗೊಂಡಿತ್ತು. ಮಾರ್ಚ್ 14 ರಂದು ಅಧಿವೇಶನ ಪುನರಾರಂಭವಾಯಿತು ಮತ್ತು ಎಪ್ರಿಲ್ 7 ರಂದು ಅನಿಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಬಜೆಟ್ ಅಧಿವೇಶನವು ಒಟ್ಟು 177 ಗಂಟೆ 50 ನಿಮಿಷಗಳ ಕಾಲ ಒಟ್ಟು 27 ಸಭೆಗಳನ್ನು ನಡೆಸಿತ್ತು.

ಈ ಮಧ್ಯೆ ಕಾಂಗ್ರೆಸ್ ಸಂಸದರಾದ ಮಾಣಿಕಂ ಟಾಗೋರ್ ಮತ್ತು ಟಿ.ಎನ್. ಪ್ರತಾಪನ್ ಆವ್ರು 17 ದಿನಗಳಲ್ಲಿ ಕೇವಲ ದಿನಗಳ ಕಾಲ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಹಾಜರಾಗಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ತೀವ್ರ ತರಾಟೆಗೆ ತೆಗೆದಿದ್ದರು.



Join Whatsapp