ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷವನ್ನು ಹರಡುತ್ತಿರುವ ಹಿಂದೂ ಜಾಗೃತಿ ಸಮಿತಿಯ ಸಂಯೋಜಕ ಚಂದ್ರು ಮೊಗೇರ್ ವಿರುದ್ಧ ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಬುಧವಾರ ದೂರು ದಾಖಲಿಸಿದ್ದಾರೆ.
ಕಾರ್ಯಕರ್ತ ಜಿಯಾ ನೊಮಾನಿ ಮೊಗರ್ ಅವರ ಟ್ವಿಟರ್ ಪೋಸ್ಟ್ ಅನ್ನು ಉಲ್ಲೇಖಿಸಿ, ಹಲಾಲ್ ಮಾಂಸ ನಿಷೇಧದ ನಡುವೆಯೇ ಹಿಂದೂ ಮಾರಾಟಗಾರರಿಂದ ಮಾತ್ರ ಹಣ್ಣುಗಳನ್ನು ಖರೀದಿಸಲು ಜನರಿಗೆ ಒತ್ತಾಯಿಸಲಾಗುತ್ತಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಮುಸ್ಲಿಂ ವ್ಯಾಪಾರಿಗಳ ವಿರುದ್ಧದ ಹೇಳಿಕೆಗಳು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುತ್ತಿದ್ದು, ಇಂತಹ ಹೇಳಿಕೆಗಳು ಕೋಮು ದ್ವೇಷವನ್ನು ಉತ್ತೇಜಿಸುತ್ತವೆ ಮತ್ತು ಸಮಾಜದ ಸಾಮಾಜಿಕ ರಚನೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಅವರು ಹೇಳಿದರು ಮತ್ತು ತಮ್ಮ ಹೇಳಿಕೆಯ ಜೊತೆಗೆ ವೀಡಿಯೊ ಲಿಂಕ್ ಗಳು ಮತ್ತು ಸುದ್ದಿಯ ಲಿಂಕ್ ಗಳನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಸಂಜಯ್ ನಗರ ಪೊಲೀಸರು ದೂರನ್ನು ಕೈಗೆತ್ತಿಕೊಂಡಿದ್ದು, ಮೊಗೇರ್ ವಿರುದ್ಧ ಎಫ್ ಐಆರ್ ದಾಖಲಿಸುವ ಮುನ್ನ ಕಾನೂನು ಅಭಿಪ್ರಾಯ ಪಡೆಯುತ್ತಿದ್ದಾರೆ.