ಆಂಧ್ರಪ್ರದೇಶ: ಬಡತನದಿಂದಾಗಿ ಶಿಶುಗಳನ್ನು ಮಾರಾಟ ಮಾಡುತ್ತಿರುವ ತಾಯಂದಿರು !

Prasthutha|

ವಿಜಯವಾಡ: ಬಡತನದಿಂದಾಗಿ ಆಂಧ್ರಪ್ರದೇಶದ ಕೆಲವು ಮಹಿಳೆಯರು ತಮ್ಮ ಮಕ್ಕಳನ್ನು ಮಾರಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.

- Advertisement -

ಕಳೆದ ಮೂರ್ನಾಲ್ಕು ದಿನಗಳಲ್ಲಿ ಏಲೂರು ಮತ್ತು ಮಂಗಳಗಿರಿಯಲ್ಲಿ ಎರಡು ಪ್ರಕಣಗಳು ವರದಿಯಾಗಿದ್ದು. ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದೆ ಮಕ್ಕಳನ್ನು ಮಾರಾಟ ಮಾಡಿದ್ದಾರೆ.

ಮಕ್ಕಳಿಲ್ಲದ ದಂಪತಿ ಮಗು ದತ್ತು ಪಡೆಯುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಗ್ಯಾಂಗ್ ಗಳು ಮಾರುಕಟ್ಟೆಯಲ್ಲಿ ಶಿಶುಗಳನ್ನು ಮಾರಾಟಕ್ಕೆ ಇಡುತ್ತಿವೆ. ಇದು ಕರುಣಾಜನಕವಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿಯೊಬ್ಬರು ಹೇಳಿದ್ದಾರೆ.

- Advertisement -

ಆಂಧ್ರಪ್ರದೇಶ-ತೆಲಂಗಾಣ ಗಡಿ ಪ್ರದೇಶವಾದ ಅಶ್ವರಾವ್ ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೂರು ದಿನದ ಗಂಡು ಮಗುವನ್ನು ಅದರ ಪೋಷಕರಿಗೆ  1 ಲಕ್ಷಕ್ಕೆ  ಮಾರಾಟ ಮಾಡಲಾಗಿದ್ದು, ಮಗುವಿನ ತಂದೆ ಗಂಟಾ ಅರುಣ್ ಕುಮಾರ್ ಮತ್ತು ಅಜ್ಜಿ ಗಂಟಾ ಮೇರಿ ನವಜಾತ ಶಿಶುವನ್ನು  2 ಲಕ್ಷಕ್ಕೆ ನೋಂದಾಯಿತ ವೈದ್ಯಕೀಯ ವೈದ್ಯರಿಗೆ (ಆರ್ ಎಂಪಿ) ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ನಂತರ ಮಗುವನ್ನು ವಿಶಾಖಪಟ್ಟಣದ ದಂಪತಿಗೆ  3 ಲಕ್ಷಕ್ಕೂ, ಆ ನಂತರ ಮಗುವನ್ನು ಅನಕಾಪಲ್ಲಿ ದಂಪತಿಗೆ 5 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು.



Join Whatsapp