ಆಝಾನ್, ಹಲಾಲ್ ಬಳಿಕ ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಹೊಸ ಅಭಿಯಾನ !

Prasthutha|

ಮಂಡ್ಯ: ರಾಜ್ಯದಲ್ಲಿ ಹಿಜಾಬ್, ಆಝಾನ್ , ಹಲಾಲ್ ಕಟ್ ಕುರಿತು ಸಂಘಪರಿವಾರ ಸೃಷ್ಟಿಸಿದ ವಿವಾದದ ಜ್ವಾಲೆ ಕೊನೆಗೊಳ್ಳುವ ಮೊದಲೇ ಮತ್ತೊಂದು ಅಭಿಯಾನವನ್ನು ಶುರುಹಚ್ಚಿದೆ. ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸದಂತೆ ಅಭಿಯಾನ ಆರಂಭವಾಗಿದೆ.

- Advertisement -

ಮುಸ್ಲಿಮರು ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವುದು ಸರಿಯಲ್ಲ , ಇದನ್ನು ಶಾಸ್ತ್ರವು ಒಪ್ಪುವುದಿಲ್ಲ ಎಂದು ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹವನ್ನ ಯಾವ ದೇವಾಲಯದಲ್ಲಿಯೂ ಪ್ರತಿಷ್ಠಾಪನೆ ಮಾಡದಂತೆ ಅಭಿಯಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ದೇವರ ಮೂರ್ತಿ ಹಿಂದಿನಿಂದಲೂ ಊರಿನ ಯಜಮಾನರ ಮಾರ್ಗದರ್ಶನದಲ್ಲಿ ಕೆತ್ತನೆಯಾಗುತ್ತಿದೆ. ಶಾಸ್ರ್ತ ಪ್ರಕಾರವಾಗಿ ವಿಶ್ವಕರ್ಮ ಜನಾಂಗದವರೇ ಮೂರ್ತಿಯನ್ನು ಕೆತ್ತನೆ ಮಾಡಬೇಕು. ಈ ಕಾರಣದಿಂದ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡದಂತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ



Join Whatsapp