ಬಿಜೆಪಿ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷಗಳು ಒಂದಾಗಬೇಕು: ಶರದ್ ಪವಾರ್

Prasthutha|

ನವದೆಹಲಿ: ಬಿಜೆಪಿ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು. ಕೇಸರಿ ಪಕ್ಷಕ್ಕೆ ಕೌಂಟರ್​ ಕೊಡಲೆಂದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​, ಶಿವಸೇನೆ ಮತ್ತು ಎನ್​ಸಿಪಿ ಒಟ್ಟಾಗಿದ್ದೇವೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಹೇಳಿದ್ದಾರೆ.

- Advertisement -

ಸಂಸತ್ತಿನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶರದ್​ ಪವಾರ್​ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿತ್ತು. ಪ್ರಧಾನಿ ಭೇಟಿಯಾದ ನಂತರ ಮಾತನಾಡಿದ ಎನ್ ​ಸಿಪಿ ವರಿಷ್ಠ ಪವಾರ್, ಶಿವಸೇನೆ ಸಂಸದ ಸಂಜಯ್​ ರಾವುತ್​ ಅವರಿಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ ವಿಷಯದ ಬಗ್ಗೆ ಪ್ರಧಾನಿ ಗಮನ ಸೆಳೆದಿದ್ದೇನೆ ಎಂದು ಹೇಳಿದರು. ರಾವುತ್​ ವಿರುದ್ಧ ಇಂತಹ ಕ್ರಮ ಕೈಗೊಳ್ಳಲು ಯಾವುದೇ ಕಾರಣವಿಲ್ಲ. ಆದರೆ, ಕೇಂದ್ರದ ಏಜೆನ್ಸಿಯೇ ಈ ಕ್ರಮ ತೆಗೆದುಕೊಂಡಿರುವ ಕಾರಣ ಇದರ ಹೊಣೆಯನ್ನೂ ಕೇಂದ್ರ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.

ಬಿಜೆಪಿ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು. ಕೇಸರಿ ಪಕ್ಷಕ್ಕೆ ಕೌಂಟರ್​ ಕೊಡಲೆಂದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​, ಶಿವಸೇನೆ ಮತ್ತು ಎನ್​ಸಿಪಿ ಒಟ್ಟಾಗಿದ್ದೇವೆ. ಅಲ್ಲದೇ, ಬಿಜೆಪಿ ಜೊತೆಗೆ ಎನ್​ಸಿಪಿ ಏನು ಮಾಡಬೇಕಾಗಿಲ್ಲ ಎಂದು ತಿಳಿಸಿದರು.



Join Whatsapp