ಪಕ್ಷ ರಾಜಕಾರಣ ಮಾಡಬೇಕಿದ್ದರೆ “ಹೊರಟ್ಟಿ” ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಲಿ: ಮೋಹನ ಲಿಂಬಿಕಾಯಿ

Prasthutha|

ಹುಬ್ಬಳ್ಳಿ: ‘ನಾನು ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದು, ಇದಕ್ಕೆ ಪಕ್ಷದ ಮುಖಂಡರು ಹಸಿರು ನಿಶಾನೆ ತೋರಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ’ ಎಂದು ಮೋಹನ ಲಿಂಬಿಕಾಯಿ ಹೇಳಿದರು.

- Advertisement -

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ ಹೊರಟ್ಟಿಯವರು  ಅವರೇ ಅಭ್ಯರ್ಥಿ ಎಂದು ಹೇಳಿರುವ ಮಾತಿನಲ್ಲಿ ಹುರುಳಿಲ್ಲ. ಮೂರು ತಿಂಗಳ ಹಿಂದೆ ನಡೆದ ಪಕ್ಷದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಹೆಸರು ಸೇರಿದಂತೆ, ಸಂದೀಪ ಬೂದಿಹಾಳ ಮತ್ತು ಸುಧೀರ ದೇಶಪಾಂಡೆ ಅವರ ಹೆಸರು ಪ್ರಸ್ತಾಪವಾಗಿತ್ತು. ಸಭೆಯಲ್ಲಿ ಶಾಸಕ ಜಗದೀಶ ಶೆಟ್ಟರ್, ಪಕ್ಷದ ಮುಖಂಡ ಅರುಣ್‌ಕುಮಾರ್ ಸಹ ಇದ್ದರು. ಅಂತಿಮವಾಗಿ ನನ್ನ ಹೆಸರು ಶಿಫಾರಸು ಮಾಡಲಾಯಿತು’ ಎಂದು ಹೇಳಿದರು

 ‘ಮುಖ್ಯಮಂತ್ರಿ  ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಅವರ ಸೂಚನೆಯಂತೆ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ ಅವರೊಂದಿಗೆ  ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಪ್ರಚಾರ ಕೈಗೊಂಡು, ಮತದಾರರ ನೋಂದಣಿ ಮಾಡಿಸುತ್ತಿದ್ದೇನೆ. ಹೊರಟ್ಟಿ ಅವರು ನಾನೇ ಬಿಜೆಪಿ ಅಭ್ಯರ್ಥಿ ಎನ್ನುವ ಮೂಲಕ, ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

 ‘ಹೊರಟ್ಟಿ ಅವರನ್ನು ಪಕ್ಷಕ್ಷೆ ಯಾರೂ ಆಹ್ವಾನಿಸಿಲ್ಲ. ಬಿಜೆಪಿಯಲ್ಲಿ ಸಕ್ರಿಯ ರಾಜಕಾರಣಕ್ಕೆ 75 ವರ್ಷದ ಮಿತಿ ಇದೆ. ಇದಕ್ಕೆ ಬದ್ಧರಾಗಿ ರಾಜ್ಯದ ಯಡಿಯೂರಪ್ಪ ಅವರಿಂದಿಡಿದು ರಾಷ್ಟ್ರಮಟ್ಟದ ನಾಯಕರವರೆಗೆ ಹಲವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಹೊರಟ್ಟಿ ಅವರಿಗೆ ಸದ್ಯದಲ್ಲೇ 75 ವರ್ಷವಾಗಲಿದೆ. ಅಂತಹವರಿಗೆ ಟಿಕೆಟ್ ಕೊಡುವ ಅನಿವಾರ್ಯತೆ ಮತ್ತು ಅವರ ಅಗತ್ಯತೆ ಪಕ್ಷಕ್ಕೆ ಇಲ್ಲ’   ಎಂದು ಹೇಳಿದರು.

 ‘ಬಸವರಾಜ ಹೊರಟ್ಟಿ ಅವರು ಪಕ್ಷಾತೀತವಾದ ಸಭಾಪತಿ ಹುದ್ದೆಯಲ್ಲಿದ್ದುಕೊಂಡು, ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಆ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಅವರ ಹೇಳಿಕೆ ಕಾನೂನುಬಾಹಿರ. ಪಕ್ಷ ರಾಜಕಾರಣ ಮಾಡಬೇಕಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದರು.



Join Whatsapp