ಶಬ್ದ ಮಾಲಿನ್ಯ ವಿರುದ್ಧ ಕೇಸ್ ದಾಖಲಿಸಲು ಡಿಜಿಪಿ ಸುತ್ತೋಲೆ

Prasthutha|

ಬೆಂಗಳೂರು: ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿಟ್ಯೂಟ್ ಗಳು, ಅದ್ಧೂರಿ ಸಮಾರಂಭಗಳು ಸೇರಿದಂತೆ ಎಲ್ಲಾ ಕಡೆ ಶಬ್ದ ಮಾಲಿನ್ಯದ ಬಗ್ಗೆ  ನಿಗಾವಹಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ & ಐಜಿಪಿ) ಪ್ರವೀಣ್ ಸೂದ್ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ಎಡಿಜಿಪಿಗಳು ಹಾಗೂ ಎಸ್ ಪಿಗಳಿಗೆ ಸೂಚಿಸಿದ್ದಾರೆ.

- Advertisement -

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, ಶಬ್ದ ಮಾಲಿನ್ಯದ ಸಂಬಂಧ ಹೈಕೋರ್ಟ್ ಆದೇಶ ಯಥಾವತ್ತಾಗಿ ಪಾಲಿಸಲು ಪೊಲೀಸ್ ಆಯುಕ್ತರುಗಳು, ಎಡಿಜಿಪಿಗಳು ಹಾಗೂ ಎಸ್ ಪಿಗಳಿಗೆ ಸೂಚನೆ ನೀಡಿದ್ದಾರೆ.

ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿಟ್ಯೂಟ್ ಗಳು, ಅದ್ದೂರಿ ಸಮಾರಂಭಗಳು ಸೇರಿದಂತೆ ಎಲ್ಲಾ ಕಡೆ ಶಬ್ದ ಮಾಲಿನ್ಯದ ಬಗ್ಗೆ  ನಿಗಾವಹಿಸುವಂತೆ ಸೂಚಿಸಿದ್ದಾರೆ.  ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆ 2000 ಅಡಿ ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.



Join Whatsapp