ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು । ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಅಧ್ಯಕ್ಷ ರಾಜಪಕ್ಷೆ

Prasthutha|

ಕೊಲಂಬೊ: ಎಪ್ರಿಲ್ 1 ರಂದು ಶ್ರೀಲಂಕಾದೆಲ್ಲೆಡೆ ಸುಗ್ರೀವಾಜ್ಞೆಯ ಮೂಲಕ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷ ಗೋತಬಯ ರಾಜಪಕ್ಷೆ ಮಂಗಳವಾರ ತಡರಾತ್ರಿ ಹಿಂಪಡೆದಿದ್ದಾರೆ.

- Advertisement -

ದೇಶದಲ್ಲಿ ಯಾವುದೇ ಗೊಂದಲವನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ತುರ್ತು ಪರಿಸ್ಥಿತಿಯನ್ನು ಮಂಗಳವಾರ ತಡರಾತ್ರಿ ಹೊರಡಿಸಿದ ಗೆಝೆಟ್ ಸುತ್ತೋಲೆ ಸಂಖ್ಯೆ 2274/ 10ರ ಅನ್ವಯ ಹಿಂಪಡೆದಿರುವುದಾಗಿ ರಾಜಪಕ್ಷೆ ತಿಳಿಸಿದ್ದಾರೆ.

ಜನರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ವಿರುದ್ಧ ಏಪ್ರಿಲ್ 3 ರಂದು ಬೃಹತ್ ಪ್ರಮಾಣದ ಪ್ರತಿಭಟನೆಗಳನ್ನು ಯೋಜಿಸಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು.

- Advertisement -

ಸರ್ಕಾರದ ನಡೆಯನ್ನು ವಿರೋಧಿಸಿ ಶ್ರೀಲಂಕಾದೆಲ್ಲೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದ್ದವು. ಇದನ್ನು ತಡೆಯಲು ಕರ್ಫ್ಯೂ ಹೇರಲಾಗಿತ್ತು.

225 ಸದಸ್ಯರ ಸಂಸತ್ತಿನಲ್ಲಿ ಆಡಳಿತಾರೂಢ ಒಕ್ಕೂಟವು ತನ್ನ ಬಹುಮತವನ್ನು ಕಳೆದುಕೊಂಡಿದ್ದು, 40 ಕ್ಕೂ ಹೆಚ್ಚು ಸಂಸದರು ಆಡಳಿತಾರೂಢ ಒಕ್ಕೂಟದಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಗೆಜೆಟ್‌ನ ರದ್ದತಿ ಮಹತ್ವವನ್ನು ಪಡೆದುಕೊಂಡಿದೆ.



Join Whatsapp