ಸದನದಲ್ಲಿ ತಲೆವಸ್ತ್ರ, ಮಾಂಸ ಬಗ್ಗೆ ಚರ್ಚೆ ನಡೆಯುತ್ತಿರುವುದು ಆತಂಕಕಾರಿ: ವಿಶ್ವನಾಥ್

Prasthutha|

ಹುಣಸೂರು ಸದನದಲ್ಲಿ ತಲೆವಸ್ತ್ರ, ಮಾಂಸದ ಬಗ್ಗೆ ಚರ್ಚೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ. ಹೆಚ್‍. ವಿಶ್ವನಾಥ್ ಬೇಸರ ವ್ಯಕ್ತಪಡಿದ್ದಾರೆ.

- Advertisement -

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಂ 115 ನೇ ಜಯಂತಿಯಲ್ಲಿ ಜಗಜೀವನರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದ ಅವರು, ಶೋಷಿತರ ಕುರಿತು ಚರ್ಚಿಸಬೇಕಾದ ಸದನದಲ್ಲಿ ತಲೆವಸ್ತ್ರ, ಮಾಂಸದ ಬಗ್ಗೆ ಚರ್ಚೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ.  ಶೋಷಿತ ಸಮುದಾಯಗಳ ಅಭಿವೃದ್ದಿಗಾಗಿ ಸಿದ್ದರಾಮಯ್ಯ 28 .5 ಸಾವಿರ ಕೋಟಿ ನೀಡಿದ್ದಾರೆ. ಜೊತೆಗೆ ಆ ವರ್ಗದ ಜನರೇ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ್ದರು. ಬೊಮ್ಮಾಯಿಯವರು 28 ಸಾವಿರ ಕೋಟಿ ಘೋಷಿಸಿದ್ದಾರೆ. ಆದರೆ ಯಾರ ಉದ್ದಾರವಾಗಿದೆ. ಶೋಷಿತರ ಬದಲಿಗೆ ಉಳ್ಳವರ ಅಭಿವೃದ್ದಿಯಾಗುತ್ತಿರುವುದು ಪರಿಸ್ಥಿತಿಯ ದ್ಯೋತಕವೇ ಸರಿ ಎಂದು ಹೇಳಿದರು‌.



Join Whatsapp