ಲಾಕ್ ಡೌನ್ ಸಂಕಷ್ಟದಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸರ್ಕಾರದಿಂದ ‘ಕರೆಂಟ್ ಶಾಕ್’: ಎಎಪಿ ವಾಗ್ದಾಳಿ

Prasthutha|

ಬೆಂಗಳೂರು: ರಾಜ್ಯದ ಜನರು ದಿನನಿತ್ಯ ಬೆಲೆ ಏರಿಕೆ, ಲಾಕ್ಡೌರನ್ ಸಂಕಷ್ಟದಿಂದ ತತ್ತರಿಸಿ ಸಂಕಷ್ಟ ಎದುರಿಸುವ ವೇಳೆಯೇ ಕರೆಂಟ್ ಶಾಕ್ ನೀಡುತ್ತಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಒಂದೂವರೆ ವರ್ಷದಲ್ಲಿ ವಿದ್ಯುತ್ ದರವನ್ನು ಮೂರನೇ ಸಲ ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಮಹಾರಾಷ್ಟ್ರ ಹೊರತು ಪಡಿಸಿದರೆ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಮುಂದಿದೆ. ಆದರೂ ಇಲ್ಲಿ ಪದೇಪದೆ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸರಕಾರ ತಳ್ಳುತ್ತಿದೆ ಎಂದರು. ದೆಹಲಿಯಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯ ಹೊರತಾಗಿಯೂ ಎಎಪಿ 200ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸುತ್ತಿದೆ, ಆದರೆ ಕರ್ನಾಟಕದಲ್ಲಿ ದರ ಏರಿಕೆಗೆ ಕಡಿವಾಣ ಹಾಕಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸರಕಾರವನ್ನು ಪ್ರಶ್ನಿಸಿದರು.

ಶೇ.40ಕ್ಕಿಂತಲೂ ಹೆಚ್ಚಿನ ಕೈಗಾರಿಕೆಗಳು ಕೋವಿಡ್ ಕಾರಣದಿಂದ ಮುಚ್ಚಲ್ಪಟ್ಟಿದೆ. ಅವೆಲ್ಲವೂ ವಿದ್ಯುತ್ ಬಳಸದೇ ಕನಿಷ್ಟ ದರವನ್ನು ಪಾವತಿಸಿದ್ದವು. ಸರಕಾರವು ಶುಲ್ಕ ವಸೂಲಿಯಾತಿಯಲ್ಲಿ ವಿಫಲ ಹೊಂದಿರುವುದೇ ಪೂರೈಕೆಯಲ್ಲಿ ಅನಗತ್ಯ ಏರಿಕೆಯಾಗಲು ಕಾರಣ, ಸರ್ಕಾರವು ತನ್ನ ತಪ್ಪಿನಿಂದಾಗುತ್ತಿರುವ ಈ ನಷ್ಟವನ್ನು ಗ್ರಾಹಕರ ಮೇಲೆ ಹೇರುತ್ತಿದೆ ಎಂದರು.



Join Whatsapp